ಪ್ರವಾದಿ ನಿಂದನೆ: ನೂಪುರ್ ಶರ್ಮಾಗೆ ವಿಚಾರಣೆಗೆ ಹಾಜರಾಗಲು ಕೋಲ್ಕತಾ ಪೊಲೀಸರ ಸಮನ್ಸ್

ಕೋಲ್ಕತಾ, ಜೂ. 13: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿ ನೂಪುರ್ ಶರ್ಮಾ ಅವರಿಗೆ ಕೋಲ್ಕತ್ತಾ ಪೊಲೀಸರು ಸೋಮವಾರ ಸಮನ್ಸ್ ಜಾರಿ ಮಾಡಿದ್ದಾರೆ.
ಹೇಳಿಕೆ ದಾಖಲಿಸಲು ಜೂನ್ 20ರಂದು ನರ್ಕೇಲ್‌ದಂಗ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಅವರಿಗೆ ಸೂಚಿಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿ.ವಿ. ಚರ್ಚಾ ಕಾರ್ಯಕ್ರಮದ ಸಂದರ್ಭ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನೀಡಿದ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆದಿತ್ತು.
ಈ ಹೇಳಿಕೆ ಕುರಿತಂತೆ ತೃಣಮೂಲ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸೊಹೈಲ್ ಅವರು ಕೂಡ ಕಾಂಟೈ ಪೊಲೀಸ್ ಠಾಣೆಯಲ್ಲಿ ನೂಪುರ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
Next Story