ಇತಿಹಾಸ ಹೇಗೆ ಬದಲಾಯಿಸಲು ಸಾಧ್ಯ?: ಅಮಿತ್ ಶಾ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ

ನಿತೀಶ್ ಕುಮಾರ್ (Photo:PTI)
ಪಾಟ್ನಾ: ಯಾರಾದರೂ ಇತಿಹಾಸವನ್ನು ಹೇಗೆ ಬದಲಾಯಿಸಬಹುದು ಎಂದು ನನಗೆ ಅರ್ಥವಾಗುತ್ತಿಲ್ಲ. ಇತಿಹಾಸವೆಂದರೆ ಇತಿಹಾಸ. ಯಾರಾದರೂ ಅದನ್ನು ಬದಲಾಯಿಸಲು ಹೇಗೆ ಸಾಧ್ಯ ? ಎಂದು ಇತಿಹಾಸದ ಪುಸ್ತಕಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದರು.
"ನೀವು ಇತಿಹಾಸವನ್ನು ಬದಲಾಯಿಸುತ್ತೀರಾ? ಅದನ್ನು ಹೇಗೆ ಬದಲಾಯಿಸಬಹುದು ಎಂದು ನನಗೆ ಅರ್ಥವಾಗುತ್ತಿಲ್ಲ. ಇತಿಹಾಸವು ಇತಿಹಾಸವಾಗಿದೆ" ಎಂದು ಕುಮಾರ್ ಹೇಳಿದರು
ಇತಿಹಾಸಕಾರರು ಇದುವರೆಗೆ ಮೊಘಲರ ಮೇಲೆ ಮಾತ್ರ ಗಮನಹರಿಸಿ ಇತರ ಅದ್ಭುತ ಸಾಮ್ರಾಜ್ಯಗಳನ್ನು ಕಡೆಗಣಿಸಿದ್ದಾರೆ. ಹೀಗಾಗಿ ಇತಿಹಾಸ ಬದಲಿಸುವ ಸಮಯ ಬಂದಿದೆ ಎಂದು ಶಾ ಇತ್ತೀಚೆಗೆ ಹೇಳಿದ್ದರು.
ಭಾಷೆ ಬೇರೆ ವಿಷಯ ಆದರೆ ನೀವು ಮೂಲಭೂತ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ, ಇತಿಹಾಸ ಪುಸ್ತಕಗಳಲ್ಲಿ ಮೊಘಲರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಗೃಹ ಸಚಿವರ ಹೇಳಿಕೆಗೆ ಕುಮಾರ್ ಉತ್ತರಿಸಿದರು.
इतिहास के पुनर्लेखन की भाजपा की माँग पर @NitishKumar ने दो टूक शब्दों में कहा कि जो मौलिक इतिहास हैं उसको कैसे बदला जा सकता हैं @ndtvindia @Anurag_Dwary pic.twitter.com/OYK7lyJbBL
— manish (@manishndtv) June 13, 2022