ಗಾಂಜಾ ಸೇವನೆ ಆರೋಪ: ಓರ್ವ ಸೆರೆ
ಮಂಗಳೂರು : ಮಾದಕ ದ್ರವ್ಯ ಗಾಂಜಾ ಸೇವನೆ ಆರೋಪದ ಮೇರೆಗೆ ಸೆನ್ ಪೊಲೀಸರು ಪ್ರದೀಪ್ (24) ಎಂಬಾತನನ್ನು ರವಿವಾರ ಬಂಧಿಸಿದ್ದಾರೆ.
ಸೆನ್ ಪೊಲೀಸರು ಮಾದಕ ದ್ರವ್ಯ ಸಾಗಾಟ, ಮಾರಾಟ ಮತ್ತು ಸೇವನೆಯಂತಹ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಣೆ ಹಾಗೂ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ರವಿವಾರ ಬೆಳಗ್ಗೆ ೧೦:೪೦ಕ್ಕೆ ನಗರದ ಕೊಟ್ಟಾರ ಕ್ರಾಸ್ ಬಳಿ ಪ್ರದೀಪ್ ಎಂಬಾತ ಅಮಲು ವಸ್ತುವನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂತು. ತಕ್ಷಣ ವಶಕ್ಕೆ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿದಾಗ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿ ನೀಡಿದ ಧೃಢಪತ್ರದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
Next Story