ಕೆಎಸ್ಸಾರ್ಟಿಸಿಯಲ್ಲಿ ತಾಂತ್ರಿಕ-ಚಾಲನಾ ತರಬೇತಿ ಆಯೋಜನೆ

ಬೆಂಗಳೂರು, ಜೂ.13: ಕೆಎಸ್ಸಾರ್ಟಿಸಿ ವತಿಯಿಂದ ಕೌಶಲ್ಯ ಕರ್ನಾಟಕ ಯೋಜನೆಯಡಿ ಭಾರಿ ವಾಹನ ಹಾಗೂ ಲಘು ವಾಹನ ಚಾಲನಾ ತರಬೇತಿ ತಾಂತ್ರಿಕ ತರಬೇತಿಯನ್ನು ಆಯೋಜಿಸಿದೆ.
ಟೈರ್ ಫಿಟ್ಟರ್, ಆಟೋ ಮೆಕಾನಿಕ್ ಹಾಗೂ ವೆಲ್ಡರ್ ತಾಂತ್ರಿಕ ತರಬೇತಿ, ಲಘು ವಾಹನ ತರಬೇತಿಗೆ ಎಸೆಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣ ಹೊಂದಿರುವ ಬಗ್ಗೆ ಅಂಕ ಪಟ್ಟಿಯನ್ನು ಸಲ್ಲಿಸಬೇಕು. ಕನಿಷ್ಠ 18ರಿಂದ 35 ವರ್ಷ ತುಂಬಿರಬೇಕು. ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಬಾರಿ ವಾಹನ ತರಬೇತಿ ಪಡೆಯಲು ಲಘು ವಾಹನ ಚಾಲನಾ ಪರವಾನಿಗೆಯನ್ನು ಪಡೆದು ಕನಿಷ್ಠ ಒಂದು ವರ್ಷ ಆಗಿರಬೇಕು. ಕನಿಷ್ಠ 21ರಿಂದ 35 ವರ್ಷ ತುಂಬಿರಬೇಕು.
ತರಬೇತಿಯಲ್ಲಿ ಭಾಗವಹಿಸುವವರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ತಾಂತ್ರಿ ತರಬೇತಿ 90 ದಿನಗಳು, ಚಾಲನಾ ತರಬೇತಿಯನ್ನು 60 ದಿನಗಳು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760990133 ಮತ್ತು 7760992539ಗೆ ಸಂಪರ್ಕಿಸಬಹುದು ಎಂದು ನಿಗಮವು ಪ್ರಕಟನೆಯಲ್ಲಿ ತಿಳಿಸಿದೆ.
Next Story





