ಉಡುಪಿ ಸರಕಾರಿ ತಾಯಿ -ಮಕ್ಕಳ ಆಸ್ಪತ್ರೆಯ ಕಂಪ್ಯೂಟರ್ ಕಳವು
ಉಡುಪಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ
ಉಡುಪಿ, ಜೂ.12: ಉಡುಪಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಂಪ್ಯೂಟರ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಯ ಇಂಜಿನಿಯರ್ ಪ್ರಕಾಶ್ ಎಸ್. ರಜೆಯಲ್ಲಿ ತೆರಳಿದ್ದಾಗ ಜೂ.11ರ ಅಪರಾಹ್ನ 2 ಗಂಟೆಯಿಂದ ಜೂ.12ರ ಬೆಳಗ್ಗೆ 8:30ರ ಮಧ್ಯಾವಧಿಯಲ್ಲಿ ಅವರ ಟೇಬಲ್ ಮೇಲೆ ಇದ್ದ ಕಂಪ್ಯೂಟರ್, ಸಿಪಿಯು, ಕೀ ಬೋರ್ಡ್, ಮೌಸ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಅವುಗಳ ಒಟ್ಟು ಮೌಲ್ಯ 8,000 ರೂ. ಎಂದು ಅಂದಾಜಿಸಲಾಗಿದೆ. ಇಂಜಿನಿಯರ್ ಪ್ರಕಾಶ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬಿ.ಆರ್.ಶೆಟ್ಟಿ ಮಾಲಕತ್ವದ ಬಿಆರ್ಎಸ್ ಲೈಫ್ ಗ್ರೂಪ್ನವರು ಆಸ್ಪತ್ರೆಯ ಸೋಫಾ, ಕಪಾಟು, ಕುರ್ಚಿ, ಟೇಬಲ್ ಸೇರಿದಂತೆ ಕೆಲವು ಪರಿಕರಗಳನ್ನು ಮೇ 30ರಂದು ಸಂಬಂಧಪಟ್ಟವರಿಗೆ ಮಾಹಿತಿ ನೀಡದೆ ಸಾಗಾಟಕ್ಕೆ ಯತ್ನಿಸಿದಾಗ ಜಿಲ್ಲಾ ಸರ್ಜನ್ ತಡೆಯೊಡ್ಡಿದ್ದರು. ಜೂ.1ರಿಂದ ಈ ಆಸ್ಪತ್ರೆಯನ್ನು ಬಿಆರ್ಎಸ್ ಗ್ರೂಪ್ನವರು ಸರಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ.