ಐಪಿಎಲ್ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಗೆದ್ದ ಮುಕೇಶ್ ಅಂಬಾನಿ ಕಂಪೆನಿ

Photo:PTI
ಹೊಸದಿಲ್ಲಿ: ಬಿಲಿಯನೇರ್ ಮುಖೇಶ್ ಅಂಬಾನಿಯವರ ಮಾಧ್ಯಮ ಕಂಪೆನಿ ಇಂಡಿಯನ್ ಪ್ರೀಮಿಯರ್ ಲೀಗ್ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಗೆದ್ದಿದೆ. ವಾಲ್ಟ್ ಡಿಸ್ನಿ ಕಂಪನಿಯಿಂದ ಆರಂಭಿಸಿ ಸೋನಿ ಗ್ರೂಪ್ ಕಾರ್ಪೊರೇಷನ್ ತನಕ ತನ್ನ ಎದುರಾಳಿ ಬಿಡ್ ದಾರರನ್ನು ಅದು ಮೀರಿಸಿದೆ ಎಂದು ತಿಳಿದುಬಂದಿದೆ.
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಆನ್ಲೈನ್ ಹಕ್ಕುಗಳನ್ನು ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಡುವಿನ ಜಂಟಿ ಉದ್ಯಮವಾದ ವಿಯಾಕಾಮ್ 18 ಮೀಡಿಯಾ ಪ್ರೈವೇಟ್ ಗೆದ್ದುಕೊಂಡಿದೆ.
ಜೂನ್ 12 ರಂದು ಟಿವಿ ಹಾಗೂ ಡಿಜಿಟಲ್ ಹಕ್ಕಿಗಾಗಿ ಹರಾಜನ್ನು ಆರಂಭಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇನ್ನಷ್ಟೇ ಅಧಿಕೃತವಾಗಿ ಬಿಡ್ ವಿಜೇತರನ್ನು ಘೋಷಿಸಬೇಕಾಗಿದೆ.
ವಿಯಾಕಾಮ್ 18 ಮೀಡಿಯಾ ಪ್ರೈವೇಟ್ ಸುಮಾರು 2.6 ಬಿಲಿಯನ್ ಡಾಲರ್ ಗೆ ಹಕ್ಕುಗಳನ್ನು ಖರೀದಿಸಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ. ಒಪ್ಪಂದವು ಸುಮಾರು 3 ಬಿಲಿಯನ್ ಡಾಲರ್ ಎಂದು New York Times ವರದಿ ಮಾಡಿದೆ. ಆದಾಗ್ಯೂ, ಡಿಸ್ನಿಯು ಪಂದ್ಯಗಳ ಟಿವಿ ಪ್ರಸಾರದ ಹಕ್ಕುಗಳನ್ನು ಸುಮಾರು 3 ಬಿಲಿಯನ್ ಡಾಲರ್ ಗೆ ಗೆದ್ದುಕೊಂಡಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ