ಮಂಗಳೂರು: ಕೊಂಕಣಿ ಸಾಹಿತಿ ಸಿರಿಲ್ ಜಿ. ಸಿಕ್ವೇರರಿಗೆ ಶ್ರದ್ಧಾಂಜಲಿ ಸಭೆ

ಮಂಗಳೂರು, ಜೂ.14: ಇತ್ತೀಚೆಗೆ ನಿಧನರಾದ ಖ್ಯಾತ ಕೊಂಕಣಿ ಸಾಹಿತಿ ಸಿಜಿಎಸ್ ತಾಕೊಡೆ ಎಂದು ಪ್ರಸಿದ್ಧರಾಗಿದ್ದ ಸಿರಿಲ್ ಜಿ. ಸಿಕ್ವೇರರಿಗೆ ಶ್ರದ್ಧಾಂಜಲಿ ಅರ್ಪಣೆ ಸಭೆಯು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ರವಿವಾರ ನಡೆಯಿತು.
ಕೊಂಕಣಿ ಕವಿ ಟೈಟಸ್ ನೊರೊನ್ಹಾ, ರಾಕ್ಣೊ ಸಹ ಸಂಪಾದಕ ಫಾ.ರೂಪೇಶ್ ಮಾಡ್ತ ಹಾಗೂ ಕೊಂಕಣಿ ಲೇಖಕರ ಸಂಘದ ಉಪಾಧ್ಯಕ್ಷ ಡಾ ಎಡ್ವರ್ಡ್ ನಝ್ರೆತ್ ಅವರು ಸಿಜಿಎಸ್ ತಾಕೊಡೆಯೊಂದಿಗಿನ ಒಡನಾಟವನ್ನು ಮೆಲುಕು ಹಾಕಿ ನುಡಿನಮನ ಸಲ್ಲಿಸಿದರು.
ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚರ್ಡ್ ಮೊರಾಸ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಕೊಂಕಣಿಯ ಅನೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಹಾಗೂ ನಿಯಕಾಲಿಕಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಬಿಷಪ್ ಫಾ.ಹೆನ್ರಿ ಡಿಸೋಜ, ಕೊಂಕಣಿ ಸಾಹಿತಿಗಳು, ಸಂಗೀತಗಾರರು, ಕವಿಗಳು ಮತ್ತು ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೊಂಕಣಿ ಕವಿ ಲೋಯ್ಡ ರೇಗೊ ಕಾರ್ಯಕ್ರಮ ನಿರೂಪಿಸಿದರು. ಕೊಂಕಣಿ ನಾಟಕ್ ಸಭಾದ ಉಪಾಧ್ಯಕ್ಷ ಲಿಸ್ಟನ್ ಡಿಸೋಜ ವಂದಿಸಿದರು.