ವಿದ್ಯಾರ್ಥಿ ವೇದಿಕೆ ಉದ್ಘಾಟನೆ- ಪ್ರತಿಭಾ ದಿನಾಚರಣೆ

ಉಡುಪಿ, ಜೂ.೧೪: ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಮತ್ತು ಪ್ರತಿಭಾ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕಾಲೇಜಿನ ಮಹಾ ಪೋಷಕ ಡಾ.ಜಿ. ಶಂಕರ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ವಾಣಿ ಆರ್.ಬಲ್ಲಾಳ್, ಸಾಂಸ್ಕೃತಿಕ ಸಂಘದ ಸಂಚಾಲಕಿ ವಿದ್ಯಾ ಡಿ., ಕಾಲೇಜಿನ ಪ್ರಾದ್ಯಾಪಕ ಗೌರಿ ಎಸ್.ಭಟ್, ಸೋಜನ್ ಕೆ.ಜಿ., ಡಾ.ಶ್ರೀಧರ್ ಪ್ರಸಾದ್ ಕೆ. ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸಿಂಚನಾ ಬಿ.ಕೆ., ಅನುಷಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶ್ವಿನಿ ನಿರೂಪಿಸಿ, ಡಾ.ವಾಣಿ ಬಲ್ಲಾಳ್ ಸ್ವಾಗತಿಸಿ, ವಿದ್ಯಾ ಡಿ. ವಂದಿಸಿದರು.
Next Story





