ಕೂರ್ನಡ್ಕ : ಉದ್ಯಮಿ ಎಲ್.ಟಿ. ಹಸೈನಾರ್ ಹಾಜಿ ನಿಧನ

ಪುತ್ತೂರು: ನಗರದ ಕೂರ್ನಡ್ಕ ನಿವಾಸಿ, ಉದ್ಯಮಿ ಎಲ್.ಟಿ. ಹಸೈನಾರ್ ಹಾಜಿ (72) ಅಲ್ಪ ಕಾಲದ ಅಸೌಖ್ಯ ದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.
ಹಸೈನಾರ್ ಹಾಜಿ ಅವರು ಸಮಾಸ ಸೇವೆಯಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿದ್ದು, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಸಕ್ರಿಯ ಸದಸ್ಯರಾಗಿ, ಅನ್ಸಾರುದ್ದೀನ್ ಯತೀಂ ಖಾನಾ ಸಮಿತಿಯ ಸದಸ್ಯರಾಗಿ, ಮೊಟ್ಟೆತ್ತಡ್ಕ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಮಂಗಳವಾರ ಸಂಜೆ ಕೂರ್ನಡ್ಕ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
Next Story