ಜೂ.16ರಂದು ಯಕ್ಷಗಾನ ಕಲಾರಂಗದ 30ನೇ ಮನೆ ಉದ್ಘಾಟನೆ
ಉಡುಪಿ : ಮಂಗಳೂರಿನ ಉದ್ಯಮಿ ಪಿ.ಗೋಕುಲನಾಥ ಪ್ರಭು ಅವರು ತಮ್ಮ ತಾಯಿ ಪದ್ಮಾವತಿ ವೆಂಕಟ್ರಾಯ ಪ್ರಭು ಅವರ ಜನ್ಮಶತಾಬ್ದಿಯ ಸಂದರ್ಭದಲ್ಲಿ ಪಾದೂರಿನ ವಿದ್ಯಾಪೋಷಕ್ ವಿದ್ಯಾರ್ಥಿನಿ ಮಲ್ಲಿಕಾ ಇವರಿಗೆ ನಿರ್ಮಿಸಿಕೊಡುತ್ತಿರುವ ನೂತನ ಮನೆ ‘ಪದ್ಮಾವತಿ’ಯ ಉದ್ಘಾಟನೆ ಜೂ.೧೬ರಂದು ಸಂಜೆ 5ಕ್ಕೆ ಜರಗಲಿದೆ.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ವೈದ್ಯ ಡಾ.ಜೆ.ಎನ್.ಭಟ್ ಭಾಗವಹಿ ಸಲಿದ್ದಾರೆ. ಇದು ಸಂಸ್ಥೆಯು ದಾನಿಗಳ ನೆರನಿಂದ ನಿರ್ಮಿಸಿದ 30ನೇ ಮನೆಯಾಗಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story