ಉಡುಪಿ : ನಗರದ ಸಂತೆಕಟ್ಟೆ ಬಿಲ್ಲವರ ಸೇವಾ ಸಂಘ ಇವರು ನಯಂಪಳ್ಳಿ ೪ನೇ ಅಡ್ಡರಸ್ತೆಗೆ ಶ್ರೀನಾರಾಯಣ ಗುರು ಮಾರ್ಗ ಎಂದು ನಾಮಕರಣ ಮಾಡಲಿದ್ದು, ಈ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ ಸಾರ್ವಜನಿಕರು 30 ದಿನಗಳ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.