ಮಂಗಳೂರು; ರಸ್ತೆ ದಾಟುತ್ತಿದ್ದ ಮಹಿಳೆಗೆ ದ್ವಿಚಕ್ರ ವಾಹನ ಢಿಕ್ಕಿ
ಮಂಗಳೂರು: ನಗರದ ಬಿಜೈಯ ಬಾಳಿಗಾ ಸ್ಟೋರ್ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಬಿಜೈಯಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯಾ ಸೋಮವಾರ ರಾತ್ರಿ ಕೆಲಸ ಮುಗಿಸಿ ಸ್ನೇಹಿತರಾದ ಪ್ರಿಯಾ, ಯಶವಂತ, ಹರೀಶ್‌ರವರೊಂದಿಗೆ ಮನೆ ಕಡೆಗೆ ಹೋಗಲು ಬಾಳಿಗಾ ಸ್ಟೋರ್ ಎದುರುಗಡೆ ರಸ್ತೆಯ ಡಿವೈಡರ್ ದಾಟಿ ಕುಂಟಿಕಾನ ಕಡೆಯಿಂದ ಕೆಎಸ್ಸಾರ್ಟಿಸಿ ಕಡೆಗೆ ಹಾದು ಹೋಗುವ ರಸ್ತೆಯನ್ನು ದಾಟುತ್ತಿರುವಾಗ ಅಂದರೆ ಸುಮಾರು ೮:೪೫ಕ್ಕೆ ಕುಂಟಿಕಾನ ಕಡೆಯಿಂದ ಬಂದ ದ್ವಿಚಕ್ರ ವಾಹನದ ಸವಾರ ಢಿಕ್ಕಿ ಹೊಡೆದ ಎನ್ನಲಾಗಿದೆ.
ಇದರಿಂದ ಸೌಮ್ಯಾರ ಎಡ ಕಾಲಿಗೆ ಮೂಳೆ ಮುರಿತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





