Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಯುದ್ಧದಿಂದ ಮಾದಕ ಪದಾರ್ಥ ಸಮಸ್ಯೆ ಉಲ್ಬಣ...

ಯುದ್ಧದಿಂದ ಮಾದಕ ಪದಾರ್ಥ ಸಮಸ್ಯೆ ಉಲ್ಬಣ ಸಾಧ್ಯತೆ ಇಯು ಡ್ರಗ್ಸ್ ಏಜೆನ್ಸಿ ಎಚ್ಚರಿಕೆ

ವಾರ್ತಾಭಾರತಿವಾರ್ತಾಭಾರತಿ14 Jun 2022 11:17 PM IST
share
ಯುದ್ಧದಿಂದ ಮಾದಕ ಪದಾರ್ಥ ಸಮಸ್ಯೆ ಉಲ್ಬಣ ಸಾಧ್ಯತೆ ಇಯು ಡ್ರಗ್ಸ್ ಏಜೆನ್ಸಿ ಎಚ್ಚರಿಕೆ

ಲಿಸ್ಬನ್, ಜೂ.14: ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ಯುರೋಪ್‌ನಲ್ಲಿ ಮಾದಕ ಪದಾರ್ಥಗಳಿಗೆ ಹೊಸ ಅವಕಾಶವನ್ನು ಸೃಷ್ಟಿಸಬಹುದು, ಕಳ್ಳ ಸಾಗಾಣಿಕೆ ಮಾರ್ಗದಲ್ಲಿ ಬದಲಾವಣೆಯನ್ನು ಪ್ರಚೋದಿಸಬಹುದು ಮತ್ತು ಇನ್ನಷ್ಟು ಜನರನ್ನು ಮಾದಕ ಪದಾರ್ಥಗಳಿಗೆ ಒಡ್ಡುವ ಸಂಭವನೀಯತೆಯಿದೆ ಎಂದು ಲಿಸ್ಬನ್ ಮೂಲದ ಯುರೋಪಿಯನ್ ಯೂನಿಯನ್ ಡ್ರಗ್ಸ್ ಏಜೆನ್ಸಿ ಮಂಗಳವಾರ ಎಚ್ಚರಿಕೆ ನೀಡಿದೆ.

ಯುದ್ಧದ ಸಂದರ್ಭ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದವರು ಮುಂದಿನ ದಿನದಲ್ಲಿ ಡ್ರಗ್ಸ್‌ಗಳ ಚಟ ಬೆಳೆಸುವ ಸಾಧ್ಯತೆ ಹೆಚ್ಚಿದೆ ಎಂದು ‘ ದಿ ಯುರೋಪಿಯನ್ ಮಾನಿಟರಿಂಗ್ ಸೆಂಟರ್ ಫಾರ್ ಡ್ರಗ್ಸ್ ಆ್ಯಂಡ್ ಡ್ರಗ್ ಅಡಿಕ್ಷನ್(ಇಎಂಸಿಡಿಡಿಎ) ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. ಭದ್ರತೆ ಹೆಚ್ಚಿದ ಮಾರ್ಗಗಳ ಬದಲು ಪರ್ಯಾಯ ದಾರಿಗಳನ್ನು ಮಾದಕ ಪದಾರ್ಥ ಕಳ್ಳಸಾಗಣೆದಾರರು ಅನ್ವೇಷಿಸಬಹುದು. ಯುದ್ಧದಿಂದಾಗಿ ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ಪಲಾಯನ ಮಾಡಿದವರಲ್ಲಿ ಮಾದಕವಸ್ತು ಬಳಸುವವರೂ ಇರುವ ಸಾಧ್ಯತೆಯಿದ್ದು ಇದರಿಂದ ಉಕ್ರೇನ್ ಗಡಿಭಾಗದ ದೇಶಗಳ ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿದೆ . ಮಾದಕ ಪದಾರ್ಥ ಬಳಸದವರಿಗೂ ಅಪಾಯದ ಸಾಧ್ಯತೆಯಿದೆ. ಚಿಕಿತ್ಸೆಯ ಮುಂದುವರಿಕೆ, ಭಾಷಾ ಸೇವೆ , ವಾಸ್ತವ್ಯ ಕಲ್ಪಿಸುವುದು ಹಾಗೂ ಸಾಮಾಜಿಕ ಕಲ್ಯಾಣ ಸೇವೆ ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ವರದಿ ಹೇಳಿದೆ.

 ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್‌ಗಳ ನಿಯಂತ್ರಣಕ್ಕೆ ಬಂದಿರುವ ಅಫ್ಘಾನಿಸ್ತಾನದಲ್ಲಿ ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಆ ದೇಶ ಮಾದಕ ಪದಾರ್ಥಗಳ ಮಾರಾಟವನ್ನು ಪ್ರಮುಖ ಆದಾಯ ಮೂಲವನ್ನಾಗಿಸುವ ಸಾಧ್ಯೆತಯೂ ಇರುವುದರಿಂದ ಆ ದೇಶದ ಮೂಲಕ ಯುರೋಪ್‌ಗೆ ಹೆರಾಯ್ನೆ ಕಳ್ಳಸಾಗಣೆ ಹೆಚ್ಚಬಹುದು. ಮಾದಕ ಪದಾರ್ಥಗಳ ಉತ್ಪಾದನೆ, ಮಾರಾಟ ಮತ್ತು ಕಳ್ಳಸಾಗಣಿಕೆಗೆ ನಿಷೇಧವಿದ್ದರೂ ಅಫ್ಘಾನ್‌ನಲ್ಲಿ ಮಾದಕ ವಸ್ತುಗಳ ಕೃಷಿ ಹೆಚ್ಚಿರುವ ವರದಿಯಿದೆ ಎಂದು ಸಂಸ್ಥೆ ಹೇಳಿದೆ.

 ಯುರೋಪ್‌ನಲ್ಲಿನ ಮಾದಕ ವಸ್ತು ಸಮಸ್ಯೆಯ ಮೇಲೆ ಅಂತರಾಷ್ಟ್ರೀಯ ಬೆಳವಣಿಗೆಯ ಪ್ರಭಾವದ ಕುರಿತು ಆತಂಕ ಹೆಚ್ಚಿದೆ. ಮಾದಕ ವಸ್ತುಗಳ ಬಳಕೆಯ ಪ್ರಮಾಣ ಸಾಂಕ್ರಾಮಿಕದ ಪೂರ್ವದ ಅವಧಿಯ ಮಟ್ಟ ತಲುಪಿರುವ ಜತೆಗೇ ಮಾದಕ ಪದಾರ್ಥಗಳ ಉತ್ಪಾದನೆಯೂ ಹೆಚ್ಚಿದೆ ಎಂದು ಇಎಂಸಿಡಿಡಿಎ ಹೇಳಿದ್ದು, ಮಾದಕ ಪದಾರ್ಥಗಳ ಕಳ್ಳಸಾಗಣೆಯನ್ನು ನಿರ್ಬಂಧಿಸುವ ಉಪಕ್ರಮ ಹೆಚ್ಚಿಸುವಂತೆ ಯುರೋಪಿಯನ್ ದೇಶಗಳಿಗೆ ಕರೆ ನೀಡಿದೆ. ಸ್ಥಾಪಿತ ಮಾದಕ ವಸ್ತು ಮಾರಾಟ ಜಾಲದ ಮಾಹಿತಿ ಅಷ್ಟು ಸುಲಭದಲ್ಲಿ ದೊರಕುವುದಿಲ್ಲ ಮತ್ತು ಸದಾ ಹೊಸ ಪದಾರ್ಥಗಳು ಹೊರ ಹೊಮ್ಮುತ್ತಾ ಇರುತ್ತವೆ. ಇದರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ ಎಂದು ಇಎಂಸಿಡಿಡಿಎ ನಿರ್ದೇಶಕ ಅಲೆಕ್ಸಿಸ್ ಗೂಸ್ಡೀಲ್ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್‌ನಲ್ಲಿ 2020ರಲ್ಲಿ ದಾಖಲೆ ಪ್ರಮಾಣದ 213 ಟನ್‌ಗಳಷ್ಟು ಕೊಕೇನ್ ಜಫ್ತಿ ಮಾಡಲಾಗಿದ್ದು 350ಕ್ಕೂ ಅಧಿಕ ಮಾದಕ ವಸ್ತು ಉತ್ಪಾದಿಸುವ ಪ್ರಯೋಗಾಲಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X