ಹಿಂದೂ ಶಾಲಾ ಪಿಟಿಎ ಅಧ್ಯಕ್ಷರಾಗಿ ತ್ರಿವೇಣಿ ವೇಣುಗೋಪಾಲ ಪುನರಾಯ್ಕೆ

ಉದ್ಯಾವರ, ಜೂ.15: ಉದ್ಯಾವರದ 162 ವರ್ಷಗಳ ಹಿರಿಯ ಶಿಕ್ಷಣ ಸಂಸ್ಥೆ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ- ಶಿಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ಜರಗಿ 2022-2023ನೇ ಸಾಲಿಗೆ ಅಧ್ಯಕ್ಷರಾಗಿ ಡಾ. ತ್ರಿವೇಣಿ ವೇಣುಗೋಪಾಲ ಪುನರಾಯ್ಕೆಗೊಂಡರು.
ಉಪಾಧ್ಯಕ್ಷರಾಗಿ ರಾಜೀವಿ ಉಮೇಶ್ ಕರ್ಕೇರ, ಕಾರ್ಯದರ್ಶಿಗಳಾಗಿ ಅಶ್ವಿನಿ ದೇವೇಂದ್ರ, ಜತೆಕಾರ್ಯದರ್ಶಿ ಜ್ಯೋತಿ ರವೀಂದ್ರ ಶೆಟ್ಟಿ, ಕೋಶಾಧಿಕಾರಿ ಯಾಗಿ ಮುಖ್ಯೋಪಾಧ್ಯಾಯಿನಿ ಹೇಮಲತಾ ಆಯ್ಕೆಗೊಂಡರು. ಅಲ್ಲದೇ ಕಾರ್ಯಕಾರಿ ಸಮಿತಿಯನ್ನು ಸಹ ಆಯ್ಕೆ ಮಾಡಲಾಗಿದೆ ಎಂದು ಶಾಲೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story