ಪ್ರತ್ಯೇಕ ಪ್ರಕರಣ; ಇಬ್ಬರು ನಾಪತ್ತೆ

ಬೈಂದೂರು, ಜೂ.15: ಬೈಂದೂರು ಪಡುವರಿ ಗ್ರಾಮದ ಸಾಯಿ ವಿಶ್ರಾಮ್ ರೆಸಾರ್ಟ್‌ನಲ್ಲಿ ಕುಟುಂಬದೊಂದಿಗೆ ತಂಗಿದ್ದ ಮುಂಬೈಯ ವೇಣುಗೋಪಾಲ (75) ಎಂಬವರು ಜೂ.14ರಂದು ಬೆಳಗ್ಗೆ ಟಾಯ್ಲೆಟ್ಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ಕೆಮ್ಮಣ್ಣುವಿನ ಅಲ್ಯುಮಿನಿಯಂ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಹೂಡೆಯ ಇಮ್ರಾನ್(40) ಎಂಬವರು ಜೂ.5ರಂದು ಸಂಜೆ ವೇಳೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೂ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story