ಜೂ. 21ರಂದು ಟ್ರಾನ್ಸ್ ಸೆಂಡಿಂಗ್ ಬೌಂಡರೀಸ್' ಸಂಗೀತ ಕಾರ್ಯಕ್ರಮ
ಮಂಗಳೂರು, ಜೂ. 16: ವಿಶ್ವ ಸಂಗೀತ ದಿನದಂಗವಾಗಿ ಜೂ. 21ರಂದು 'ಟ್ರಾನ್ಸ್ ಸೆಂಡಿಂಗ್ ಬೌಂಡರೀಸ್' (ಗಡಿಗಳನ್ನು ಮೀರಿದ) ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮವನ್ನು ಮಾಂಡ್ ಸೊಭಾಣ್ ವತಿಯಿಂದ ಆಯೋಜಿಸಲಾಗಿದೆ.
ಸುದ್ದಿ ಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝಾರಿಯೊ, ವಿಶೇಷ ಕಾರ್ಯಕ್ರಮದಲ್ಲಿ, ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ, ಮೆಟೀರಿಯಲ್ಸ್ ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ಈಶಾನ್ ಫೆನಾಂಡಿಸ್, ಹನ್ನೆರಡು ಭಾಷೆಗಳಲ್ಲಿ ಹನ್ನೆರಡು ಹಾಡುಗಳನ್ನು ಹಾಡಲಿದ್ದಾರೆ ಎಂದು ತಿಳಿಸಿದರು.
ಈ 90 ನಿಮಿಷಗಳ ಸಂಗೀತ ಕಚೇರಿ ಶಕ್ತಿನಗರದ ಕಲಾಂಗಣ್‌ನಲ್ಲಿ ಸಂಜೆ 6:30ಕ್ಕೆ ಪ್ರಾರಂಭವಾಗಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಈಶಾನ್ ಫೆರ್ನಾಂಡಿಸ್ ಮಂಗಳೂರಿನ ಕೊಂಕಣಿಗರಾಗಿದ್ದು, ಗಿಟಾರ್ ಮಾಂತ್ರಿಕ ಆಲ್ವಿನ್ ಫೆರ್ನಾಂಡಿಸ್ ರವರ ಮಗ ಹಾಗೂ ಮಾಂಡ್ ಸೊಭಾಣ್' ಇದರ ಗುರ್ಕಾರ್' ಎರಿಕ್ ಒಝೇರಿಯೊ ಅವರ ಮೊಮ್ಮಗನಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ `ಈಶಾನ್ ಫೆರ್ನಾಂಡಿಸ್ ಅವರ ತಂದೆ ಆಲ್ವಿನ್ ಫೆರ್ನಾಂಡಿಸ್ ಗಿಟಾರ್, ಸ್ಟೀಫನ್ ಫ್ರಾಂಕ್ ಪಿಯಾನೋ ಮತ್ತು ಮೆಲ್ವಿನ್ ಫೆರ್ನಾಂಡಿಸ್ ತಾಳವಾದ್ಯದಲ್ಲಿ ಜೊತೆಯಾಗಲಿದ್ದಾರೆ, ಡಾ. ರವಿಶಂಕರ್ ರಾವ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಖ್ಯಾತ ವರ್ಣಚಿತ್ರ ಕಲಾವಿದ ವಿಲ್ಲನ್ ಸೋಜಾ ಕ್ಯಾನ್ವಾಸ್‌ನಲ್ಲಿ ಹಾಡುಗಳನ್ನು ಸೆರೆಹಿಡಿಯಲಿದ್ದಾರೆ. ಪ್ರದರ್ಶನದ ಕೊನೆಯಲ್ಲಿ ವರ್ಣಚಿತ್ರಗಳನ್ನು ಹರಾಜು ಮಾಡಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಕ ಈಶಾನ್ ಫೆರ್ನಾಂಡಿಸ್ , ಸಂಘಟಕ ಸ್ಟ್ಯಾನಿ ಅಲ್ವಾರಿಸ್, ಸಂಪರ್ಕಾಧಿಕಾರಿ ವಿಕ್ಟರ್ ಮಥಾಯಸ್, ಮಾಧ್ಯಮ ಸಂಯೋಜಕ ಟೈಟಸ್ ನೊರೊನ್ನಾ ಉಪಸ್ಥಿತರಿದ್ದರು.