'ಅಗ್ನಿಪಥ್' ಯೋಜನೆಗೆ ಬಿಹಾರದಲ್ಲಿ ಭಾರೀ ಆಕ್ರೋಶ: ಬಿಜೆಪಿ ಶಾಸಕಿಯ ವಾಹನದ ಮೇಲೆ ಕಲ್ಲುತೂರಾಟ

Photo:PTI
ಪಾಟ್ನಾ: ಸೇನಾ ಆಕಾಂಕ್ಷಿಗಳು ಸತತ ಎರಡನೇ ದಿನವೂ ಬಿಹಾರದ ಹಲವು ಭಾಗಗಳಲ್ಲಿ ರೈಲು ಹಾಗೂ ರಸ್ತೆ ಸಂಚಾರವನ್ನು ಅಸ್ತವ್ಯಸ್ತಗೊಳಿಸಿದ್ದರಿಂದ ಕೇಂದ್ರ ಸರಕಾರದ ಸಶಸ್ತ್ರ ಪಡೆಗಳ ಆಮೂಲಾಗ್ರ ನೇಮಕಾತಿ ಯೋಜನೆಯಾದ ಅಗ್ನಿಪಥ್ ವಿರುದ್ಧದ ಪ್ರತಿಭಟನೆಗಳು ಇಂದು ಹಿಂಸಾಚಾರಕ್ಕೆ ತಿರುಗಿವೆ. ಹಿಂಸಾತ್ಮಕ ಪ್ರತಿಭಟನೆಗಳು ಈಗ ದೇಶಾದ್ಯಂತ ಅನೇಕ ರಾಜ್ಯಗಳಿಗೆ ಹರಡಿವೆ.
ನಾವಡದಲ್ಲಿ ನ್ಯಾಯಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕಿ ಅರುಣಾದೇವಿ ಅವರ ವಾಹನದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಶಾಸಕಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ.
"ನನ್ನ ಕಾರಿನ ಮೇಲೆ ಪಕ್ಷದ ಧ್ವಜವನ್ನು ಅಳವಡಿಸಿದ್ದನ್ನು ನೋಡಿದ ಪ್ರತಿಭಟನಾಕಾರರು ಪ್ರಚೋದನೆಗೆ ಒಳಗಾಗಿದ್ದಾರೆ. ಅವರು ಅದನ್ನು ಹರಿದು ಹಾಕಿದರು. ನನ್ನ ಚಾಲಕ, ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ವೈಯಕ್ತಿಕ ಸಿಬ್ಬಂದಿಗೆ ಗಾಯಗಳಾಗಿವೆ" ಎಂದು ಶಾಸಕಿ ಸುದ್ದಿಗಾರರಿಗೆ ತಿಳಿಸಿದರು.
ನಾವಡಾದಲ್ಲಿ, ಯುವಕರ ಗುಂಪುಗಳು ಸಾರ್ವಜನಿಕ ಕ್ರಾಸಿಂಗ್ನಲ್ಲಿ ಟೈರ್ಗಳನ್ನು ಸುಟ್ಟು ಅಗ್ನಿಪಥ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ನಾವಡ ನಿಲ್ದಾಣದಲ್ಲಿ ರೈಲು ಹಳಿಗಳನ್ನು ತಡೆದು ಹಳಿ ಮೇಲೆ ಟೈರ್ಗಳನ್ನು ಸುಟ್ಟಿದ್ದಾರೆ. ಭಾರೀ ಜನಸಮೂಹವು ರೈಲ್ವೇ ಆಸ್ತಿಯನ್ನು ಹಾನಿಗೊಳಿಸುವುದನ್ನು ಹಾಗೂ ಪ್ರಧಾನಿ ಮೋದಿಯವರನ್ನು ನಿಂದಿಸುತ್ತಿರುವ ದೃಶ್ಯ ಕಂಡುಬಂದಿದೆ.
ನೆರೆಯ ಉತ್ತರ ಪ್ರದೇಶದ ಹಲವಾರು ಭಾಗಗಳಿಂದ ಪ್ರತಿಭಟನೆಗಳು ನಡೆದಿರುವ ಕುರಿತು ವರದಿಯಾಗಿವೆ.
#WATCH | Bihar: Armed forces aspirants protest at Bhabua Road railway station, block tracks & set a train ablaze over #AgnipathRecruitmentScheme
— ANI (@ANI) June 16, 2022
They say, "We prepared for long&now they've brought ToD (Tour of Duty) as a 4-yr job.Don't want that but the old recruitment process" pic.twitter.com/TmhfnhHiVg