ಕಾಂಗ್ರೆಸ್‌ನ ಒತ್ತಡ ತಂತ್ರಕ್ಕೆ ಬಿಜೆಪಿ ಮಣಿಯದು: ಜಗದೀಶ ಶೇಣವ
ಮಂಗಳೂರು: ಕಾಂಗ್ರೆಸ್ ಮುಖಂಡರ ಮೇಲಿನ ಇಡಿ ತನಿಖೆಯನ್ನು ವಿರೋಧಿ ಕಾಂಗ್ರೆಸ್ ದೇಶಾದ್ಯಂತ ದೊಂಬರಾಟ ನಡೆಸುತ್ತಿದ್ದು, ಇಂತಹ ಒತ್ತಡ ತಂತ್ರವನ್ನು ಬಿಜೆಪಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ ಶೇಣವ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಜಾಮೀನನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಯಾಕೆ. ಈ ರೀತಿ ಕಾಂಗ್ರೆಸ್ ಮುಖಂಡರು ತನಿಖಾ ಸಂಸ್ಥೆಯನ್ನು ಒತ್ತಡಕ್ಕೆ ಒಳಪಡಿಸುತ್ತಿರುವ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ದೆಹಲಿಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಪ್ರಹಸನ ಮಾಡಿದ್ದಾರೆ. ಈಗ ಪೊಲೀಸರು ದೌರ್ಜನ್ಯ ಎಸಗಿದ್ದಾಗಿ ಹೇಳುತ್ತಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ, ಅದೂ ಆ ಪೊಲೀಸರಿಗೆ ಇವರು ಯಾರೆಂದೇ ಗೊತ್ತಿರುವುದಿಲ್ಲ. ಹಾಗಾಗಿ ಈ ರೀತಿಯ ಎಳೆದಾಟ ಎಲ್ಲ ಸಾಮಾನ್ಯ. ಪ್ರತಿಭಟನೆಗೆ ಇಳಿದವರು ಇದಕ್ಕೆಲ್ಲಾ ತಯಾರಾಗಿರಬೇಕು ಎಂದು ಹೇಳಿದರು.
ರಾಷ್ಟ್ರೀಯ ಪಕ್ಷದ ಮುಖಂಡನೊಬ್ಬ ಬ್ಯಾರಿಕೇಡ್ ಹತ್ತುವುದು ಕೇಂದ್ರದ ನಾಯಕರನ್ನು ಮೆಚ್ಚಿಸಲು ಮಾಡುವ ನಾಟಕವಷ್ಟೆ. ಕಾಂಗ್ರೆಸ್‌ನ ಈ ಹೊಣೆಗೇಡಿತನವನ್ನು ಬಿಜೆಪಿ ಖಂಡಿಸುತ್ತದೆ. ಗಾಂಧಿ ಕುಟುಂಬ ತ್ಯಾಗಯಮ ಸಂಸಾರ ಎಂದು ಹೇಳಲಾಗುತ್ತಿದೆ. ಸ್ವಾತಂತ್ರ್ಯ ನಂತರದ ೭೫ ವರ್ಷಗಲಲ್ಲಿ ೧೭ ವರ್ಷ ಜವಾಹರ ಲಾಲ್ ನೆಹರೂ, ೧೫ ವರ್ಷ ಇಂದಿರಾಗಾಂಧಿ, ಐದು ವರ್ಷ ರಾಜೀವ್ ಗಾಂದಿ, ಮತ್ತೆ ೧೦ ವರ್ಷ ಗೊಂಬೆಯಂತಿದ್ದ ಮನಮೋಹನ್ ಸಿಂಗ್ ಅವರನ್ನು ಕೂರಿಸಿ ಸೋನಿಯಾಗಾಂಧಿ ಆಡಳಿತ ಮಾಡಿದ್ದಾರೆ. ಸುಮಾರು ೪೭ ವರ್ಷಗಳ ಕಾಲ ಅಧಿಕಾರ ಮಾಡಿರುವ ಪರಂಪಂರೆಯನ್ನು ಹೊಂದಿರುವ ಗಾಂಧಿ ಕುಟುಂಬ ತ್ಯಾಗಮಯಿ ಪರವಾರ ಎಂದು ಹೇಗೆ ಹೇಳಲು ಸಾಧ್ಯ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ರಾಧಾಕೃಷ್ಣ, ರವಿಶಂಕರ ಮಿಜಾರು, ರಂಜಿತ್ ಕಾಂಚನ್ ಉಪಸ್ಥಿತರಿದ್ದರು.