ರೈಲು ಸಂಚಾರದ ಮಾರ್ಗ ಬದಲು
ಉಡುಪಿ : ನೈಋತ್ಯ ರೈಲ್ವೆಯು ಹುಬ್ಬಳ್ಳಿ ವಿಭಾಗದ ಬೆಳಗಾವಿ-ಸುಲ್ದಾಯಿ ಸೆಕ್ಷನ್‌ನಲ್ಲಿ ಹಳಿ ದ್ವಿಪಥ ಕಾಮಗಾರಿ ಯನ್ನು ನಡೆಸಲಿರುವುದರಿಂದ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲು ನಂ.೧೧೦೯೮ ಎರ್ನಾಕುಲಂ ಜಂಕ್ಷನ್-ಪುಣೆ ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್‌ನ ಸಂಚಾರದ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಿಸಲಾಗಿದೆ.
ಜೂ.೨೨ ಮತ್ತು ೨೭ರಂದು ಈ ರೈಲು ಮಡಂಗಾವ್ ಜಂಕ್ಷನ್- ರೋಹಾ- ಪನ್ವೇಲ್-ಕಾರ್ಜಾಟ್- ಲೋನಾವಾಲ- ಪುಣೆ ಜಂಕ್ಷನ್ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಕುಲೀಂ, ಕ್ಯಾಸ್ಟಲ್‌ರಾಕ್, ಲೋಂಡಾ ಜಂಕ್ಷನ್, ಬೆಳಗಾವಿ, ಘಟಪ್ರಭಾ, ಮ್ಜೀರಜ್, ಸಾಂಗ್ಲಿ, ಕರಡ್ ಹಾಗೂ ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
Next Story