ಗೃಹ ಕಾರ್ಮಿಕ ಹಕ್ಕಿನ ಒಕ್ಕೂಟದಿಂದ ಮನವಿ

ಮಂಗಳೂರು: ಗೃಹ ಕಾರ್ಮಿಕರು ಎದುರಿಸುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಮಂಗಳೂರಿನ ಗೃಹ ಕಾರ್ಮಿಕ ಹಕ್ಕಿನ ಒಕ್ಕೂಟವು ಗುರುವಾರ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತ ಶಶಿಕುಮಾರ್ ಬಿ.ಇ ಅವರಿಗೆ ಮನವಿ ಸಲ್ಲಿಸಿತು.
ಗೃಹ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಮನವಿ ಸಲ್ಲಿಸಲಾದ ಈ ಸಂದರ್ಭ ಸಹಾಯಕ ಕಾರ್ಮಿಕ ಆಯುಕ್ತರು ಗೃಹ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ಸರಕಾರ ಅಸಂಘಟಿತ ವಲಯದ ಕಾರ್ಮಿಕರ ಸುರಕ್ಷತೆಗಾಗಿ ಸಾಮಾಜಿಕ ಅರ್ಥಿಕ ಸ್ಥಿತಿಗತಿಗಳನ್ನು ಉತ್ತಮ ಗೊಳಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ದೇಶಾದ್ಯಂತ ನೂರಾರು ಕ್ಷೇತ್ರದಲ್ಲಿ ಅಸಂಘಟಿತ ಕಾರ್ಮಿಕರಿದ್ದಾರೆ. ಸರಕಾರ ಅಸಂಘಟಿತ ಕಾರ್ಮಿಕರಿಗೆ ನೆರವು ನೀಡುವ ಉದ್ದೇಶದಿಂದ ದೇಶಾದ್ಯಂತ ಮಾನ್ಯತೆ ಹೊಂದಿರುವ ಇ-ಶ್ರಮ ಎಂಬ ಕಾರ್ಡ್‌ನ್ನು ಜಾರಿಗೆ ತಂದಿದೆ. ೩೭೨ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ನೋಂದಣಿ ಮಾಡಲು ಅವಕಾಶ ಕಲ್ಪಿಸಿದೆ. ನೋಂದಾಯಿಸಿದ ಅಸಂಘಟಿತ ಕಾರ್ಮಿಕರಿಗೆ ೨ ಲಕ್ಷ ರೂ.ನ ಅಫಘಾತ ಮಿಮೆ ಹಾಗೂ ಸರಕಾರದ ಎಲ್ಲಾ ಸೌಲಭ್ಯವನ್ನು ಇ-ಶ್ರಮ್ ಕಾರ್ಡ್ ಮೂಲಕ ವಿತರಿಸಲಾಗುವುದು ಎಂದರು.
ಮಂಗಳೂರಿನಲ್ಲಿ ೨ ಲಕ್ಷಕ್ಕೂ ಅಧಿಕ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ನೋಂದಣಿ ಮಾಡಿಸದ ಗೃಹ ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭ ಸ್ತ್ರೀಜಾಗೃತಿ ಸಮಿತಿಯ ಸಂಚಾಲಕಿ ಡಾ. ಸಂಶಾದ್ ಕುಂಜತ್ತಬೈಲ್, ಗೃಹ ಕಾರ್ಮಿಕರ ಹಕ್ಕಿನ ಒಕ್ಕೂಟದ ಕಾರ್ಯದರ್ಶಿ ಸೀತಮ್ಮ, ಸದಸ್ಯರಾದ ಕೃಷ್ಣವೇಣಿ, ಸರಸ್ವತಿ, ಯಶೋಧಾ, ಮಂಜುಳಾ ಉಪಸ್ಥಿತರಿದರು.