ಮೊಂಟೆಪದವು : ತವಸ್ಸುಲ್ ಯಂಗ್ ಮೆನ್ಸ್ ಅಸೋಶಿಯೇಶನ್ ವಾರ್ಷಿಕ ಮಹಾಸಭೆ

ಮೊಂಟೆಪದವು : ತವಸ್ಸುಲ್ ಯಂಗ್ ಮೆನ್ಸ್ ಅಸೋಶಿಯೇಶನ್ ಇದರ ವಾರ್ಷಿಕ ಮಹಾಸಭೆಯು ಸಂಘಟನೆಯ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಬದ್ರಿಯಾ ಮದರಸದ ಸದರ್ ಹಮೀದ್ ಮದನಿ ದುವಾಃ ನೆರವೇರಿಸಿದರು. ನಾಲೇಜ್ ವಿಲೇಜ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಅಝೀಝ್ ರವರು ಸಂಘಟನಾ ಸದಸ್ಯರಿಗೆ ಹಿತವಚನ ನೀಡಿದರು. ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ, ಸಂಘಟನೆಯ ಗೌರವಧ್ಯಕ್ಷರಾದ ಅಬ್ದುಲ್ ಖಾದರ್ ಗೌರವ ಅತಿಥಿಯಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕಳೆದ ವರ್ಷದ ಸಂಪೂರ್ಣ ವರದಿ ಮಂಡಿಸಲಾಯಿತು. ನಂತರ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನೌಷಾದ್ ಗುದುರು ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಮೊಂಟೆಪದವು ಹಾಗೂ 13 ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.