ಕಾಮನ್ ವೆಲ್ತ್ 2022- ಟೇಬಲ್ ಟೆನಿಸ್ ಮಹಿಳಾ ವಿಭಾಗದ ಆಯ್ಕೆ ಪಟ್ಟಿ ಕಳುಹಿಸದಂತೆ ಹೈಕೋರ್ಟ್‍ನಿಂದ ಮಧ್ಯಂತರ ಆದೇಶ

ಬೆಂಗಳೂರು, ಜೂ.16: ಕಾಮನ್ ವೆಲ್ತ್ ಕ್ರೀಡಾಕೂಟ-2022ರಲ್ಲಿ ಭಾರತವನ್ನು ಪ್ರತಿನಿಧಿಸಲು ಟೇಬಲ್ ಟೆನಿಸ್ ಮಹಿಳಾ ವಿಭಾಗದಲ್ಲಿ ಭಾಗವಹಿಸುವವರ ಅಂತಿಮ ಆಯ್ಕೆ ಪಟ್ಟಿಯನ್ನು ಜೂ.22ರವರೆಗೆ ಟೇಬಲ್ ಟೆನಿಸ್ ಫೆಡರೇಷನ್ ಆಫ್ ಇಂಡಿಯಾ(ಟಿಟಿಎಫ್‍ಐ)ಗೆ ಕಳುಹಿಸಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆ.
ಬೆಂಗಳೂರಿನ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಗಿರೀಶ್ ಕಾಮತ್(22) ಅವರು ತಮ್ಮ ಹೆಸರನ್ನು ಅಂತಿಮ ಆಯ್ಕೆಪಟ್ಟಿಯಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಮಧ್ಯಂತರ ಆದೇಶ ನೀಡಿದೆ.
ಅಲ್ಲದೆ, ಕ್ರೀಡಾ ಸಚಿವಾಲಯ, ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಇತರರಿಗೆ ತುರ್ತು ನೋಟಿಸ್ ಜಾರಿಗೊಳಿಸಿದೆ.
Next Story





