ದಿಲ್ಲಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜೂ.17: ದಿಲ್ಲಿಯಲ್ಲಿ ಇಂದು(ಜೂ.17) ನಡೆಯಲಿರುವ ಜಿ.ಎಸ್.ಟಿ. ಸಚಿವರ ಮಂಡಳಿ (ಗ್ರೂಪ್ ಆಫ್ ಮಿನಿಸ್ಟರ್ಸ್) ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದು, ಇಂದು ಸಂಜೆಯೇ ಹಿಂದಿರುಗುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದಿಲ್ಲಿಗೆ ತೆರಳುವ ಮುನ್ನ ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಭವನದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ದಿಲ್ಲಿಯಲ್ಲಿ ಯಾರನ್ನೂ ಭೇಟಿಯಾಗುವ ಉದ್ದೇಶ ಇಲ್ಲ. ಇದೊಂದು ಅಲ್ಪಾವಧಿ ಭೇಟಿ ಎಂದರು.
Next Story





