ಜಯಂಟ್ಸ್ ಗ್ರೂಪಿನಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ : ಜಯಂಟ್ಸ್ ಫೌಂಡೇಶನ್ ಸಂಸ್ಥಾಪಕ ದಿವಂಗತ ನಾನಾ ಚೂಡಾಸಮಾ ಅವರ ಜನ್ಮದಿನದ ನೆನಪಿ ಗಾಗಿ ಉಡುಪಿಯ ಜಯಂಟ್ಸ್ ಗ್ರೂಪ್ ವತಿಯಿಂದ ಉಡುಪಿಯ ಅಜ್ಜರಕಾಡಿನ ವಿವೇಕಾನಂದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉಡುಪಿ ಜಯಂಟ್ಸ್ ಗ್ರೂಪ್‌ನ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ, ಕೇಂದ್ರ ಸಮಿತಿ ಸದಸ್ಯ ಕೆ.ದಿನಕರ ಅಮೀನ್, ಘಟಕದ ಸಂಚಾಲಕ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರು, ನಿರ್ದೇಶಕ ಜಗದೀಶ್ ಅಮೀನ್, ವಿನಯ್ ಕುಮಾರ್, ಶಾಲಾ ಶಿಕ್ಷಕರಾದ ಹೇಮಲತಾ ಶೆಟ್ಟಿ, ಶೈಲಜಾ ಜಿ.ಎನ್., ಪೂರ್ಣಿಮಾ, ಜಯಲಕ್ಷ್ಮಿ ಬಿ.ಸಿ., ವಿದ್ಯಾರ್ಥಿ ನಾಯಕ ಆನಂದ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾ ಧ್ಯಾಯ ಸದಾನಂದ ಸ್ವಾಗತಿಸಿದರು. ಗಣೇಶ ಉರಾಳ್ ವಂದಿಸಿದರು.
Next Story





