ಎಂಜಿಎಂ ಕಾಲೇಜಿನಲ್ಲಿ ಜೂ.20ರಂದು ರಾಜ್ಯಮಟ್ಟದ ಕಾರ್ಯಾಗಾರ
ಉಡುಪಿ : ಉಡುಪಿಯ ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಮತ್ತು ಐಕ್ಯುಎಸಿ ಸಹಯೋಗದಲ್ಲಿ ‘ನವ ಮಾಧ್ಯಮದಲ್ಲಿ ಹೊಸ ಸಾಧ್ಯತೆಗಳು’ ವಿಷಯದ ಕುರಿತು ಜೂ.20ರಂದು ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಕಾರ್ಯಾಗಾರದ ಉದ್ಘಾಟನೆ ಬೆಳಗ್ಗೆ 9.30ಕ್ಕೆ ನಡೆಯಲಿದ್ದು, ೧೦:೧೫ಕ್ಕೆ ಬೆಂಗಳೂರಿನ ಮೀಡಿಯಾ ಮಾಸ್ಟರ್ಸ್ ಪ್ರಧಾನ ಸಂಪಾದಕ ಎಂ.ಎಸ್ ರಾಘವೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಸಂಪಾದನೆ ವಿಷಯದ ಕುರಿತು ಅಪರಾಹ್ನ ೧೨:೦೦ಕ್ಕೆ ಉಡುಪಿಯ ಶಟರ್ ಬಾಕ್ಸ್ ಫಿಲಂಸ್‌ನ ಸಚಿನ್ ಎಸ್. ಶೆಟ್ಟಿ ಕರಾವಳಿಯ ಲ್ಲುಂಟು ನೂರೆಂಟು ಕಂಟೆಂಟು, ೧೨:೪೫ಕ್ಕೆ ಉಡುಪಿಯ ಕಲಾವಿದೆ ಮಾನಸಿ ಸುಧೀರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ: ನನ್ನ ಅನುಭವ, ೨:೦೦ ಗಂಟೆಗೆ ಬೆಂಗಳೂರಿನ ಖ್ಯಾತ ನಿರೂಪಕಿ ಶಮೀರಾ ಬೆಳುವಾಯಿ ನಿರೂಪಣೆ: ಆಕಾಶದಷ್ಟು ಅವಕಾಶ ಕುರಿತು ಮಾತನಾಡಲಿದ್ದಾರೆ.
ಬಳಿಕ ೩:೩೦ಕ್ಕೆ ನಟ, ಹಿನ್ನೆಲೆ ಧ್ವನಿ ಕಲಾವಿದ, ನಿರೂಪಕ ಬಡೆಕ್ಕಿಲ ಪ್ರದೀಪ್ ಧ್ವನಿ ಜಗತ್ತಿನ ಧಣಿ ಆಗೋದು ಹೇಗೆ? ಎಂಬ ವಿಷಯದ ಕುರಿತು ಮಾತಾಡಲಿದ್ದಾರೆ. ಸಂಜೆ ೫:೦೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಗಳ ಜೊತೆಗೆ ಆಸಕ್ತ ಸಾರ್ವಜನಿಕರಿಗೂ ಮುಕ್ತ ಪ್ರವೇಶವಿದೆ ಎಂದು ಎಂಜಿಎಂ ಕಾಲೇಜಿನ ಪ್ರಕಟಣೆ ತಿಳಿಸಿದೆ.