ಕಡಲ ತಡಿಯ ಭಾಗವ- ಶಿವರಾಮ ಕಾರಂತ: ವಿಶೇಷ ಉಪನ್ಯಾಸ
ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸಂತ ಅಲೋಶಿಯಸ್‌ನ ಕನ್ನಡ ವಿಭಾಗ, ಕನ್ನಡ ಸಂಘ, ವಿಕಿ ಪೀಡಿಯಾ ಅಸೋಸಿಯೇಶನ್ ಸಹಯೋಗದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ, ಕವಿ- ಕಾವ್ಯ- ಸಾಹಿತ್ಯ- ಪರಂಪರೆಯಲ್ಲಿ ಕಡಲತಡಿಯ ಭಾರ್ಗವ- ಶಿವರಾಮ ಕಾರಂತ ವಿಶೇಷ ಉಪನ್ಯಾಸ ಕಾರ್ಯಕ್ರಮ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಬೆಳ್ತಂಗಡಿ ಸರಕಾರಿಪದ. ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಮಾತನಾಡಿ, ಕಾರಂತರು ತಮ್ಮ ಜೀವನದುದ್ದಕ್ಕೂ ಕಂಡ ಜೀವಂತ ವ್ಯಕ್ತಿಗಳನ್ನೇ ತನ್ನ ಕಾದಂಬರಿಯಲ್ಲಿ ಕೃತಿಯಾಗಿಸಿದವರು. ಅಂದಿಗೂ ಎಂದಿಗೂ ನಿತ್ಯ ಸತ್ಯ ವಿಚಾರಗಳನ್ನೇ ಸಾಹಿತ್ಯ ರೂಪಕ್ಕಿಳಿಸಿದವರು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಪ್ರವೀಣ್ ಮಾರ್ಟಿಸ್, ಶಿವರಾಮ ಕಾರಂತರ ಕನ್ನಡ ಸೇವೆಯ ಕುರಿತು ಮಾತನಾಡಿದರು. ದ.ಕ. ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಹಾಲಿಂಗ ಭಟ್ ಸ್ವಾಗತಿಸಿದರು. ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸುಧಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ವಿಕಿಪೀಡಿಯಾ ಅಸೋಸಿಯೇಶನ್ ಅಧ್ಯಕ್ಷ ಡಾ. ವಿಶ್ವನಾಥ ಬದಿಕಾನ ವಂದಿಸಿದರು.







