ಉಡುಪಿ: ಮೂವರಲ್ಲಿ ಕೋವಿಡ್ ಸೋಂಕು ಪತ್ತೆ
ಉಡುಪಿ : ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಮೂರು ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇಂದು ನಾಲ್ವರು ರೋಗದಿಂದ ಮುಕ್ತರಾದರೆ ಜಿಲ್ಲೆಯಲ್ಲೀಗ ಒಟ್ಟು 9 ಸಕ್ರೀಯ ಪ್ರಕರಣಗಳಿವೆ.
ದಿನದಲ್ಲಿ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಮೂವರು ಸಹ ಉಡುಪಿ ತಾಲೂಕಿನವರಾಗಿದ್ದಾರೆ. ಎಲ್ಲಾ ಮೂವರು ತಮ್ಮ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ. ೯ ಮಂದಿ ಯಲ್ಲಿ ಒಬ್ಬರು ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಇಂದು ಒಟ್ಟು ೧೯೮ ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದ್ದು, ಉಡುಪಿ ತಾಲೂಕಿನ ೧೫೮ ಮಂದಿಯಲ್ಲಿ ಮೂವರು ಪಾಸಿಟಿವ್ ಬಂದಿದ್ದಾರೆ. ಕುಂದಾಪುರ ತಾಲೂಕಿನ ೨೨ ಹಾಗೂ ಕಾರ್ಕಳ ತಾಲೂಕಿನ ೧೮ ಮಂದಿಯಲ್ಲಿ ಯಾರಲ್ಲೂ ಸೋಂಕು ಕಂಡುಬಂದಿಲ್ಲ.
೬೪೨ ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು ೬೪೨ ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ ೬೧೬ ಮಂದಿ ಮುನ್ನೆಚ್ಚರಿಕೆಯ ಡೋಸ್ ಪಡೆದಿದ್ದರೆ, ಆರು ಮಂದಿ ಮೊದಲ ಡೋಸ್ ಹಾಗೂ ೨೦ ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.





