ರೈಲಿ ಢಿಕ್ಕಿ : ಅಪರಿಚಿತ ವ್ಯಕ್ತಿ ಮೃತ್ಯು
ಮಂಗಳೂರು : ರೈಲು ಢಿಕ್ಕಿಯಾಗಿ ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶುಕ್ರವಾರದಂದು ಬಂಟ್ವಾಳ- ಪಡೀಲು ರೈಲು ನಿಲ್ದಾಣಗಳ ನಡುವಿನ ರೈಲ್ವೆ ಕಿ.ಮೀ ನಂ.180/ 200ರ ಬಳಿ ಸಂಭವಿಸಿದೆ.
ರೈಲು ಗಾಡಿ ಸಂಖ್ಯೆ 06488 ಬಡಿದು ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಅದೇ ರೈಲಿನಲ್ಲಿ ಮಂಗಳೂರಿಗೆ ಚಿಕಿತ್ಸೆಗೆಂದು ತರಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಹರೆ
ಗುಂಡು ಮುಖ, ದಪ್ಪ ಮೂಗು, ಒಂದು ಇಂಚು ಉದ್ದದ ಕಪ್ಪು ಕೂದಲು ಹೊಂದಿದ್ದು ಗಡ್ಡ ಮೀಸೆ ಬಿಟ್ಟಿರುತ್ತಾರೆ. ಕಂದು ನೀಲಿ ಬಿಳಿ ಉದ್ದ ಗೆರೆಗಳ ತುಂಬು ತೋಳಿನ ಅಂಗಿ, ಕಪ್ಪು ಜೀನ್ಸ್ ಪ್ಯಾಂಟ್, ಕಂದು ಬಣ್ಣದ ಬರ್ಮುಡಾ ಚಡ್ಡಿ, ಬೆಲ್ಟ್ ಧರಿಸಿದ್ದಾರೆ. ಸೊಂಟದಲ್ಲಿ ಉಡುದಾರ,ಅದರಲ್ಲಿ ಎರಡು ಕೀ, ಎಡಕಾಲಿನಲ್ಲಿ ದಾರ, ಕುತ್ತಿಗೆಯಲ್ಲಿ ಕಪ್ಪು ಮತ್ತು ಬಿಳಿ ಮಣಿ ಇರುವ ಸರ ಇದೆ.
ಸಂಬಂಧಿಕರು/ ವಾರಸುದಾರರು ಇದ್ದರೆ ರೈಲ್ವೆ ಪೊಲೀಸರನ್ನು (0824- 2220559 ಅಥವಾ 9480800470) ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ತಿಳಿಸಿದ್ದಾರೆ.





