ಭೂಕುಸಿತ: ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ
ಬನಿಹಾಲ್, ಜೂ. 17: ಜಮ್ಮವಿನ ರೋಮೆಪಾಡಿಯಲ್ಲಿ ಬೃಹತ್ ಭೂಕುಸಿತ ಸಂಭವಿಸಿದ ಪರಿಣಾಮ ಬನಿಹಾಲ್‌ನ ಸಮೀಪದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ವಾಹನ ಸಂಚಾರ ಸ್ಥಗಿತಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರವನ್ನು ಸಂಪರ್ಕಿಸುವ 270 ಕಿ.ಮೀ. ಸರ್ವಋತು ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ರೋಮೆಪಾಡಿಯಲ್ಲಿ ಬೆಳಗ್ಗೆ ಸುಮಾರು 11 ಗಂಟೆಗೆ ಭೂಕುಸಿತ ಸಂಭವಿಸಿತು ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಅಧಿಕಾರಿಗಳು ರಸ್ತೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ‘‘ಬೆಟ್ಟದಿಂದ ದೊಡ್ಡ ಬಂಡೆಗಳು ಉರುಳಿ ಬಿದ್ದಿವೆ. ಇದು ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಪೂರ್ಣ ಅಡ್ಡಿ ಉಂಟು ಮಾಡಿದೆ’’ ಎಂದು ಸಂಚಾರ (ರಾಷ್ಟ್ರೀಯ ಹೆದ್ದಾರಿ)ದ ಪೊಲೀಸ್ ಉಪ ಆಯುಕ್ತ ಅಸ್ಗರ್ ಮಲಿಕ್ ಅವರು ಹೇಳಿದ್ದಾರೆ.
Next Story