ದ್ವಿತೀಯ ಪಿಯುಸಿ ಫಲಿತಾಂಶ: ಮತ್ತೆ ಅಗ್ರಸ್ಥಾನದಲ್ಲಿ ದಾಖಲೆ ಉಳಿಸಿಕೊಂಡ ದ.ಕ. ಜಿಲ್ಲೆ

ಮಂಗಳೂರು: ದ.ಕ. ಜಿಲ್ಲೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನದ ದಾಖಲೆಯನ್ನು ಮುಂದುವರಿಸಿದೆ. ಪ್ರಸಕ್ತ ಸಾಲಿನ ಪರೀಕ್ಷಾ ಫಲಿತಾಂಶದಲ್ಲಿ ಶೇ. 88.02ರೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಕಳೆದ ವರ್ಷ ಕೊರೊನ ಕಾರಣ ಪರೀಕ್ಷೆ ಇಲ್ಲದೆ ಫಲಿತಾಂಶ ಘೋಷಿಸಲಾಗಿತ್ತು.
ಕಳೆದ ಸಾಲಿನಲ್ಲಿಯೂ (2021) ದ.ಕ. ಜಿಲ್ಲೆಯಲ್ಲಿ 445 ಮಂದಿ ವಿದ್ಯಾರ್ಥಿಗಳು 600ರಲ್ಲಿ 600 ಅಂಕಗಳನ್ನು ದಾಖಲಿಸಿದ್ದರು. 2020ನೆ ಸಾಲಿನಲ್ಲೂ ಶೇ. 90.71 ಫಲಿತಾಂಶದೊಂದಿಗೆ ದ.ಕ. ಜಿಲ್ಲೆ ಅಗ್ರ ಸ್ಥಾನದಲ್ಲಿತ್ತು.
ದ.ಕ. ಜಿಲ್ಲೆಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 2013ರಲ್ಲಿ ಶೇ. 91.76 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, 2014ರಿಂದ 2016ರವರೆಗೆ ಅನುಕ್ರಮವಾಗಿ ಶೇ.86.4, ಶೇ. 93.09, ಶೇ.90.48 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿತ್ತು.
2017ರಲ್ಲಿ ಶೇ. 89.92 ಫಲಿತಾಂಶದೊಂದಿಗೆ ದ್ವಿತೀಯ, 2018ರಲ್ಲಿ ಶೇ. 91.47 ಫಲಿತಾಂಶದೊಂದಿಗೆ ಪ್ರಥಮ, 2019ರಲ್ಲಿ ಶೇ.90.91 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ದಾಖಲಿಸಿತ್ತು.