ಕಾರ್ಕಳದ ಕೃಷಿಕನ ಮಗನಿಗೆ ಪಿಯುಸಿಯಲ್ಲಿ 3ನೆ ಸ್ಥಾನ

ಕಾರ್ಕಳ : ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳದ ಶ್ರೀಭುವನೇಂದ್ರ ಪಿಯು ಕಾಲೇಜಿನ ವಿದ್ಯಾರ್ಥಿ ಯು.ಎಸ್. ಅದ್ವೈತ್ ಶರ್ಮಾ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನಿಯಾಗಿದ್ದಾರೆ.
ಇವರ ತಂದೆ ಶ್ರೀನಿವಾಸ ಭಟ್ ಕೃಷಿಕರಾಗಿದ್ದು, ತಾಯಿ ಶಾಲಿನಿ ಗೃಹಿಣಿ ಯಾಗಿದ್ದಾರೆ. ತನ್ನ ಸಾಧನೆ ಬಗ್ಗೆ ಪ್ರತಿಕ್ರಿಯಿಸಿ ಅದ್ವೈತ್, ಫಲಿತಾಂಶದ ಬಗ್ಗೆ ಆಶ್ಚರ್ಯ ನನಗೆ ಆಶ್ಚರ್ಯ ಆಗಿದೆ. ಇಷ್ಟು ಅಂಕ ಪಡೆಯುವ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೆ ನನಗೆ ವಿಶ್ವಾಸ ಇತ್ತು. ಓದಿನ ಜೊತೆಗೆ ಕ್ರೀಡೆಯಲ್ಲೂ ಭಾಗವಹಿಸುತ್ತಿದ್ದೆ. ಇದರಿಂದ ಓದುವುದರಿಂದ ಆಗುತ್ತಿರುವ ಒತ್ತಡದಿಂದ ದೂರ ವಿರಲು ಕ್ರೀಡೆ ನನಗೆ ಸಹಕಾರಿಯಾಗಿತ್ತು ಎಂದರು.
‘ಈಗಾಗಲೇ ಸಿಇಟಿ ಪರೀಕ್ಷೆ ಬರೆದಿದ್ದೇನೆ. ಮುಂದೆ ಜೆಇಇ ಪರೀಕ್ಷೆ ಬರೆ ಯುವ ಆಸಕ್ತಿ ಕೂಡ ಇದೆ. ಭವಿಷ್ಯದಲ್ಲಿ ಏರೋಸ್ಪೇಸ್‌ನಲ್ಲಿ ಕೆಲಸ ಮಾಡುವ ಆಸಕ್ತಿ ಯನ್ನು ಹೊಂದಿದ್ದೇನೆ. ನನ್ನ ಈ ಸಾಧನೆಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಿದ ಪೋಷಕರು ಮತ್ತು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.