ಮೊದಲು ಹೊಡೆದು ನಂತರ ಯೋಚಿಸುವುದು ಸಂವೇದನಾಶೀಲ ಸರ್ಕಾರಕ್ಕೆ ಸೂಕ್ತವಲ್ಲ: ವರುಣ್ ಗಾಂಧಿ

ಹೊಸದಿಲ್ಲಿ: ಅಗ್ನಿಪಥ ಯೋಜನೆ ಕುರಿತು ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಶಸ್ತ್ರ ಪಡೆ, ಭದ್ರತೆ ಮತ್ತು ಯುವಕರ ಭವಿಷ್ಯದ ವಿಚಾರದಲ್ಲಿ “ಮೊದಲು ಹೊಡೆದು ನಂತರ ಯೋಚಿಸುವುದು” ಸಂವೇದನಾಶೀಲ ಸರ್ಕಾರಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಯೋಜನೆಯಲ್ಲಿ ತಂದ ಬದಲಾವಣೆಗಳನ್ನು ಉಲ್ಲೇಖಿಸಿದ ವರುಣ್ ಗಾಂಧಿ, ಸಶಸ್ತ್ರ ಪಡೆಗಳಲ್ಲಿ ಯುವಕರಿಗೆ ಸೈನಿಕರಾಗಿ ಅಲ್ಪಾವಧಿಯ ಉದ್ಯೋಗ ಘೋಷಿಸುವಾಗ, ನೀತಿಯನ್ನು ರೂಪಿಸುವಾಗ ಅದರ ವಿವಿಧ ಆಯಾಮಗಳನ್ನು ಪರಿಗಣಿಸಲಿಲ್ಲ ಎಂದು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಯೋಜನೆಯ ಅಡಿಯಲ್ಲಿ ಸೇನೆಗೆ ಸೇರಿಕೊಂಡ 75 ಪ್ರತಿಶತದಷ್ಟು ಅಭ್ಯರ್ಥಿಗಳು ಕೇವಲ ನಾಲ್ಕು ವರ್ಷಗಳಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ. ಹಾಗೂ ಸೈನಿಕರಿಗೆ ನೀಡುವ ನಿವೃತ್ತಿ ಭತ್ಯೆ ಹಾಗೂ ಇತರೆ ಸೌಕರ್ಗಳಿಂದಲೂ ವಂಚಿತರಾಗುತ್ತಾರೆ. ಇದು ಸೇನೆಗೆ ಸೇರುವ ಯುವ ಜನತೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆ.
ಯುವ ಜನರ ತೀವ್ರ ಆಕ್ರೋಶದ ಬಳಿಕ ಗರಿಷ್ಠ ವಯೋಮಿತಿಯನ್ನು 23 ವರ್ಷಕ್ಕೆ ಏರಿಸಲಾಗಿದ್ದು, ಕೆಲವು ಸರ್ಕಾರಿ ಇಲಾಖೆಗಳು ಉದ್ಯೋಗಗಳಲ್ಲಿ ಅಗ್ನಿವೀರ್‌ಗಳಿಗೆ ಆದ್ಯತೆಯನ್ನು ಘೋಷಿಸಿವೆ ಎಂದು ndtv ವರದಿ ಮಾಡಿದೆ.
'अग्निपथ योजना' को लाने के बाद महज कुछ घंटे के भीतर इसमें किए गए संशोधन यह दर्शाते हैं कि संभवतः योजना बनाते समय सभी बिंदुओं को ध्यान में नहीं रखा गया।
— Varun Gandhi (@varungandhi80) June 18, 2022
जब देश की सेना, सुरक्षा और युवाओं के भविष्य का सवाल हो तो ‘पहले प्रहार फिर विचार’ करना एक संवेदनशील सरकार के लिए उचित नहीं।







