ಪಿಯುಸಿ ಫಲಿತಾಂಶ: ವಿದ್ಯೋದಯ ಪ.ಪೂ.ಕಾಲೇಜಿಗೆ 16 ಸ್ಥಾನಗಳು
ಉಡುಪಿ, ಜೂ.೧೮: ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜು ೨೦೨೧-೨೨ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ಭಾಗದಲ್ಲಿ ಶೇ. ೧೦೦ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.೯೮.೮೭ ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ಓಂಕಾರ್ ಪ್ರಭು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವುದು ಸೇರಿದಂತೆ ರಾಜ್ಯಮಟ್ಟದಲ್ಲಿ ಒಟ್ಟು ೧೧ ಸ್ಥಾನಗಳನ್ನು ಕಾಲೇಜು ಪಡೆದಿದೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲೂ ಕಾಲೇಜಿನ ವಿದ್ಯಾರ್ಥಿಗಳು ಐದು ಸ್ಥಾನಗಳನ್ನು ಪಡೆದಿದ್ದಾರೆ.
ಈ ಬಾರಿ ವಿಜ್ಞಾನ ವಿಭಾಗದಲ್ಲಿ ೩೨೨ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ೨೧೪ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೧೦೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿ ಓಂಕಾರ್ ಪ್ರಭು ಹಿಂದಿಯಲ್ಲಿ ೧೦೦, ಇಂಗ್ಲೀಷ್ ೯೮, ಭೌತಶಾಸ್ತ್ರ ೧೦೦, ರಸಾಯನ ಶಾಸ್ತ್ರ ೯೮, ಗಣಿತ ೧೦೦ ಮತ್ತು ಗಣಕಜ್ಞಾನದಲ್ಲಿ ೧೦೦ ಅಂಕ ಗಳಿಸುವ ಮೂಲಕ ಒಟ್ಟು ೫೯೬ ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ ೩ನೇ ಸ್ಥಾನ ಗಳಿಸಿದ್ದಾನೆ.
ಉಳಿದಂತೆ ನಿಯತಾ ೫೯೪ ಅಂಕಗಳೊಂದಿಗೆ ೫ನೇ ಸ್ಥಾನ, ಲಕ್ಷ್ಮೀ ಪಿ. ೫೯೨ ಅಂಕಗಳೊಂದಿಗೆ ೭ನೇ ಸ್ಥಾನ, ಪ್ರಣ್ಯಮ್ಯ ಆಚಾರ್ಯ, ಕೆ.ಎಸ್. ನಿಹಾರಿಕಾ ನವ್ಯಾ ದಿನೇಶ್ ಶೆಟ್ಟಿ ತಲಾ ೫೯೧ ಅಂಕಗಳೊಂದಿಗೆ ೮ನೇ ಸ್ಥಾನ, ಪಾವನ್ ಎ. ಶೆಟ್ಟಿ, ಈಶಾ ಕುಂದರ್, ಅಮರನಾಥ ಭಟ್ ಬಿ. ಮತ್ತು ಚಿನ್ಮಯ ಅಡಿಗ ೫೯೦ ಅಂಕಗಳೊಂದಿಗೆ ೯ ನೇ ಸ್ಥಾನ ಮತ್ತು ಜಾಗೃತಿ ಚಂದ್ರಶೇಖರ್ ೫೮೯ ಅಂಕಗಳೊಂದಿಗೆ ೧೦ನೇ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಈ ವರ್ಷ ೧೭೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ೮೮ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೮೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ೭ ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದ ಮೇಘನಾ ಮೆಂಡನ್ ೫೯೧ ಅಂಕಗಳೊಂದಿಗೆ ೬ನೇ ಸ್ಥಾನ, ಹಿರಲ್ ಸುಂದರ್ ೫೯೦ ಅಂಕಗಳೊಂದಿಗೆ ೭ನೇ ಸ್ಥಾನ, ದರ್ಶನ್ ಆರ್. ಶೆಟ್ಟಿ ಮತ್ತು ಲರಿಸ್ಸಾ ಹೆಜಲ್ ನಜರೆತ್ ೫೮೯ ಅಂಕಗಳೊಂದಿಗೆ ೮ನೇ ಸ್ಥಾನ ಮತ್ತು ವಿಥಿಕಾ ವಿ. ಶೆಟ್ಟಿ ೫೮೭ ಅಂಕಗಳೊಂದಿಗೆ ೧೦ನೇ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.