ಪಿಯುಸಿ ಫಲಿತಾಂಶ: ಪಿಪಿಸಿಗೆ ವಿಜ್ಞಾನದಲ್ಲಿ ೧೦, ವಾಣಿಜ್ಯದಲ್ಲಿ 13 ಸ್ಥಾನ
ವಿಜ್ಞಾನ ವಿಭಾಗದಲ್ಲಿ ಭವ್ಯ ನಾಯಕ್ ರಾಜ್ಯಕ್ಕೆ ದ್ವಿತೀಯ ಸ್ಥಾನ

ಭವ್ಯ ನಾಯಕ್
ಉಡುಪಿ : ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 10 ಹಾಗೂ ವಾಣಿಜ್ಯ ವಿಭಾಗದಲ್ಲಿ 13 ಸ್ಥಾನ ಪಡೆಯುವ ಮೂಲಕ ಅತ್ಯುತ್ಕೃಷ್ಟ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ಭವ್ಯ ನಾಯಕ್ ಒಟ್ಟು ೫೯೭ ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲೇ ದ್ವಿತೀಯ ಸ್ಥಾನವನ್ನು ಉಳಿದ ಮೂವರೊಂದಿಗೆ ಹಂಚಿಕೊಂಡಿದ್ದಾರೆ.
ಉಳಿದಂತೆ ನೀತಾ ಕೆ. ರಾವ್ (೫೯೩) ಮತ್ತು ಸುಹಾಸ್ ಶೆಣೈ (೫೯೩) ಆರನೇ ಸ್ಥಾನನ್ನು ಶ್ರೇಯಾ ಆರ್ ಶೆಟ್ಟಿ (೫೯೨), ಮೋಹನ್ ಎಸ್ ಆರ್ (೫೯೨) ಏಳನೇ ಸ್ಥಾನ ವೃದ್ಧಿ ಶೆಟ್ಟಿ (೫೯೦), ಗಜಾನನ ನಾಯಕ್ (೫೯೦) ಒಂಭತ್ತನೇ ಸ್ಥಾನ, ನಂದನ್ ಉಪಾಧ್ಯಾಯ (೫೮೯), ಸ್ವಾತಿ ಆರ್ ಕಿಣಿ (೫೮೯) ಮತ್ತು ವೈಷ್ಣವಿ ಆರ್ ಮೊಹರೆರ್ (೫೮೯) ಹತ್ತನೇ ಸ್ಥಾನ ಹಂಚಿಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಛಾಯಾ (೫೯೨) ಮತ್ತು ಆಕಾಶ್ ಶೇಟ್ (೫೯೨) ಐದನೇ ರ್ಯಾಂಕ್ನ್ನು, ಸ್ವಾತಿ ಕಾಮತ್(೫೯೦) ಮತ್ತು ವಿರಾಜ್ ವಿ ಶೆಟ್ಟಿ (೫೯೦) ಏಳನೇ ಸ್ಥಾನ, ಶ್ರೇಯಾ ಎಂ ಬಲ್ಲಾಳ್ (೫೮೯), ಶ್ರೀರಕ್ಷಾ ಎಂ.ಎಸ್. (೫೮೯), ಪ್ರಾರ್ಥನಾ ಎಂ. ನಾಯಕ್ (೫೮೯), ಅನನ್ಯ (೫೮೯) ಎಂಟನೇ ರ್ಯಾಂಕ್ನ್ನು, ಶ್ರೇಯಾ ವಿ.ಕುಂದರ್ (೫೮೮), ಭೂಮಿಕಾ ಜೆ.ವಿ. (೫೮೮), ಸ್ವಪ್ನ ಕೆ.ಎಚ್. (೫೮೮) ಒಂಭತ್ತನೇ ಸ್ಥಾನ ಹಾಗೂ ಐಶ್ವರ್ಯ ಎಸ್ (೫೮೭), ಕ್ರಿಸಾನ್ ಮೋನಿಸ್ (೫೮೭) ಹತ್ತನೇ ಸ್ಥಾನ ಹಂಚಿಕೊಂಡಿದ್ದಾರೆ.
ವಿಜ್ಞಾನ ವಿಭಾಗದ ಒಟ್ಟು ೩೧೨ ವಿದ್ಯಾರ್ಥಿಗಳಲ್ಲಿ ೨೦೭ ಮಂದಿ ಮತ್ತು ವಾಣಿಜ್ಯ ವಿಭಾಗದ ೨೭೧ವಿದ್ಯಾರ್ಥಿಗಳಲ್ಲಿ ೧೫೫ ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು, ಕಾರ್ಯದರ್ಶಿ ಡಾ. ಶಶಿಕಿರಣ್ ಉಮಾಕಾಂತ್ ಹಾಗೂ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.