ದ್ವಿತೀಯ ಪಿಯುಸಿ ಫಲಿತಾಂಶ: ಉಳ್ಳಾಲದ ಅವಳಿ ಸಹೋದರಿಯರಿಗೆ ಸಮಾನ ಅಂಕ

ಮಂಗಳೂರು : ೨೦೨೧-೨೨ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಳ್ಳಾಲದ ಅವಳಿ ಸಹೋದರಿಯರು ಸಮಾನ ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಆಯೀಶಾ ಜುಮ್ನಾ ಹಾಗೂ ಫಾತಿಮಾ ಜುಮಾನ ಸಮಾನ ಅಂಕಗಳಿಸಿದ ಸಹೋದರಿಯರು. ಉಳ್ಳಾಲ ಪಾಂಡ್ಯರಾಜ್ ಬಳ್ಳಾಲ್ ಕಾಲೇಜಿನ ವಿದ್ಯಾರ್ಥಿನಿಯರಾದ ಇವರು ವಿಜ್ಞಾನ ವಿಭಾಗದಲ್ಲಿ 527 ಸಮಾನ ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಉಳ್ಳಾಲದ ಯು.ಟಿ ಇಸ್ಮಾಯಿಲ್-ಖತೀಜಾ ಕೌಸರ್ ದಂಪತಿಯ ಪುತ್ರಿಯಾಗಿರುವ ಇವರು ಉಳ್ಳಾಲದ ಮಾಜಿ ಶಾಸಕ, ಕನ್ನಡದ ಕವಿ ದಿ. ಬಿ.ಎಂ. ಇದ್ದಿನಬ್ಬ ಅವರ ಮರಿಮೊಮ್ಮ ಕ್ಕಳು.
Next Story