ಮುಂದಿನ ತಲೆಮಾರಿಗೆ ಜಾನಪದ ಕಲೆ ಪರಿಚಯಿಸುವುದು ಅಗತ್ಯ: ತಿಮ್ಮೆಗೌಡ

ಉಡುಪಿ, ಜೂ.೧೮: ಸಾಂಸ್ಕೃತಿಕ ಲೋಕಕ್ಕೆ ಜಾನಪದವೇ ಬೇರು. ಮುಂದಿನ ತಲೆಮಾರಿಗೆ ಜಾನಪದ ಕಲೆಗಳನ್ನು ಪರಿಚಯಿಸುವ ಕೆಲಸ ಸರಕಾರ ಹಾಗೂ ಸಂಘ-ಸಂಸ್ಥೆೆಗಳ ಮೂಲಕ ನಡೆಯಬೇಕಾಗಿದೆ ಎಂದು ಜಾನಪದ ಪರಿಷತ್ ರಾಜ್ಯಾಾಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ಶನಿವಾರ ಆಯೋಜಿಸಲಾದ ಜಾನಪದ ಉತ್ಸವವನ್ನು ಉದ್ಘಾಾಟಿಸಿ ಅವರು ಮಾತನಾಡುತಿದ್ದರು.
ಹಬ್ಬ-ಹರಿದಿನಗಳ ಆಚರಣೆಯಲ್ಲಿ ಜಾನಪದವಿದೆ. ಇದರ ಆಚರಣೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಜನಪದ ಎಲ್ಲ ಸಂಸ್ಕೃತಿಯ ಮೂಲ. ದೇಶದಲ್ಲಿ ವಿವಿಧ ಧರ್ಮ, ಭಾಷೆಗಳಲ್ಲಿ ಅವರದ್ದೇ ಆದ ಕಲೆ, ಸಂಸ್ಕೃತಿಗಳಿವೆ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಪ್ರದೇಶಗಳಿಗನುಗುಣವಾಗಿ ಜನಪದ ಕಲೆ ಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ರಂಗಕರ್ಮಿ ಪ್ರದೀಪ್‌ಚಂದ್ರ ಕುತ್ಪಾಡಿ ಅವರಿಗೆ ಜಾನಪದ ಪ್ರಶಸ್ತಿ ಪ್ರದಾನ ಮಾಡಲಾ ಯಿತು. ಬಳಿಕ ವಿಜಯ ಗೋಪಾಲ ಬಂಗೇರ ಅವರ ನೆನಪಿನಂಗಳದಿಂದ ಪುಸ್ತಕ ಬಿಡುಗಡೆ ಹಾಗೂ ಉಡುಪಿ ಮತ್ತು ಬ್ರಹ್ಮಾವರ ತಾಲೂಕು ಘಟಕಗಳ ಪದಗ್ರಹಣ ನಡೆಯಿತು.
ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಕೆ.ರಘುಪತಿ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಗರಸಭೆ ಸದಸ್ಯ ರಮೇಶ್ ಕಾಂಚನ್, ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆೆ, ಲಯನ್ಸ್ ನಿಯೋಜಿತ ಜಿಲ್ಲಾ ಗವರ್ನರ್ ಡಾ.ಎಂ.ಕೆ.ಭಟ್, ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಎಸ್.ಆರ್., ಜಾನಪದ ಪರಿಷತಿನ ಗೌರವಾಧ್ಯಕ್ಷ ಡಿ.ಶ್ರೀಧರ ಶೇಣವ, ಕಾರ್ಯಾಧ್ಯಕ್ಷ ಅನಂತ ಕುಮಾರ್ ಹೆಗ್ಡೆ, ವಲಯಾಧ್ಯಕ್ಷ ಲೀಲಾಧರ ಶೆಟ್ಟಿ, ನೀಲಕಂಠ ಹೆಗ್ಡೆ, ಗೋಪಿನಾಥ ಮುನಿಯಾಲು, ಗಿರೀಶ್ ಬೈಂದೂರು, ಸುದರ್ಶನ ಹೆಗ್ಡೆ, ದಿನಕರ ಶೆಟ್ಟಿ ಬಸ್ರೂರು, ಸಾರ್ವಜನಿಕ ಸಂಪರ್ಕ ಅಧಿಕಾರಿ ಸಾಧನಾ ಕಿಣಿ, ಮಹಿಳಾ ಘಟಕದ ಅಧ್ಯಕ್ಷೆ ಅಮಿತಾಂಜಲಿ, ಸಂಘಟನ ಕಾರ್ಯದರ್ಶಿ ಗೋಪಾಲ ಸಿ.ಬಂಗೇರ, ಖಜಾಂಚಿ ಜಯರಾಮ ಆಚಾರ್ಯ ಉಪಸ್ಥಿತರಿದ್ದರು.
ಉಡುಪಿ ತಾಲೂಕು ಘಟಕದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಸ್ವಾಗತಿಸಿ ದರು. ಕಾರ್ಯದರ್ಶಿ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.