ಕಾಬೂಲ್ ಗುರುದ್ವಾರದ ಮೇಲೆ ದಾಳಿ: 100 ಕ್ಕೂ ಹೆಚ್ಚು ಅಫ್ಘಾನ್ ಸಿಖ್ ಹಾಗೂ ಹಿಂದೂಗಳಿಗೆ ಇ-ವೀಸಾ ನೀಡಿದ ಭಾರತ

Photo: Twitter
ಹೊಸದಿಲ್ಲಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನಲ್ಲಿರುವ ದಶಮೇಶ್ ಪಿತಾ ಸಾಹಿಬ್ ಗುರುದ್ವಾರದ ಮೇಲೆ ಶನಿವಾರ ಬೆಳಿಗ್ಗೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಓರ್ವ ಸಿಖ್ ವ್ಯಕ್ತಿ ಸೇರಿದಂತೆ ಇಬ್ಬರು ಕೊಲ್ಲಲ್ಪಟ್ಟಿದ್ದಾರೆ. ಇತರ ಏಳು ಮಂದಿ ಗಾಯಗೊಂಡರು. ಈ ಹಿನ್ನೆಲೆಯಲ್ಲಿ ಭಾರತವು 100 ಕ್ಕೂ ಹೆಚ್ಚು ಅಫ್ಘಾನ್ ಸಿಖ್ ಹಾಗೂ ಹಿಂದೂಗಳಿಗೆ ಆದ್ಯತೆಯ ಮೇಲೆ ಇ-ವೀಸಾವನ್ನು ನೀಡಿದೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.
Next Story