'ಅಗ್ನಿಪಥ' ಯೋಜನೆ ಕೂಡಲೇ ಹಿಂಪಡೆಯಬೇಕು: ಆರ್ಜೆಡಿ ನಾಯಕ ತೇಜಸ್ವಿ ಯಾದವ್

Photo:PTI
ಹೊಸದಿಲ್ಲಿ: ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ 'ಅಗ್ನಿಪಥ' ಯೋಜನೆಯನ್ನು ಸರಕಾರ ತಕ್ಷಣ ಹಿಂಪಡೆಯಬೇಕು ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ರವಿವಾರ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದರು.
“ಸೈನಿಕರಾಗಿ ದೇಶಸೇವೆ ಮಾಡುವ ತವಕದಲ್ಲಿರುವ ದೇಶದ ಯುವಕರಲ್ಲಿ ತೀವ್ರ ಅಸಮಾಧಾನವಿದೆ. ಯುವಕರ ಆತ್ಮ ಸತ್ತರೆ, ದೇಶದ ಆತ್ಮವೂ ಸಾಯುತ್ತದೆ. ಯುವಕರು ಹಲವು ವರ್ಷಗಳಿಂದ ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಾರೆ. ಭಾರತ ಸರಕಾರ ಯುವಕರ ಸಂದೇಹಗಳನ್ನು ನಿವಾರಿಸಬೇಕು'' ಎಂದಿರುವ ತೇಜಸ್ವಿ ಯಾದವ್ ಅವರು 'ಅಗ್ನಿಪಥ' ಯೋಜನೆ ಕುರಿತು ಕೇಂದ್ರಕ್ಕೆ 20 ಪ್ರಶ್ನೆಗಳನ್ನು ಎತ್ತಿದರು.
Next Story