ತೊಕ್ಕೊಟ್ಟು: ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಲಾರೆನ್ಸ್ ಉರ್ಬಾನ್ ಡಿಸೋಜ ಆಯ್ಕೆ

ಲಾರೆನ್ಸ್ ಉರ್ಬಾನ್ ಡಿಸೋಜ
ಉಳ್ಳಾಲ, ಜೂ.19: ತೊಕ್ಕೊಟ್ಟಿನ ಶಿವಾಜಿ ಪ್ರೆಂಡ್ಸ್ ಸರ್ಕಲ್ (ರಿ) ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಅಧ್ಯಕ್ಷರಾಗಿ ಲಾರೆನ್ಸ್ ಉರ್ಬಾನ್ ಡಿಸೋಜ ಭಟ್ನಗರ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೇಶವ, ಕಾರ್ಯದರ್ಶಿಯಾಗಿ ರೋಹನ್ ತೊಕ್ಕೊಟು, ಸಹ ಕಾರ್ಯದರ್ಶಿಯಾಗಿ ಚಂದ್ರಹಾಸ ಶೆಟ್ಟಿ ಪಿಲಾರ್, ಚಂದ್ರಶೇಖರ ಬೋಳಾರ್, ಕೋಶಾಧಿಕಾರಿಯಾಗಿ ಮಾಧವ ಗಟ್ಟಿ ಕ್ರೀಡಾ ಕಾರ್ಯದರ್ಶಿಯಾಗಿ ಯು.ಎಚ್ ಆಲ್ತಾಫ್, ಲೆಕ್ಕ ಪರಿಶೋಧಕರಾಗಿ ವಾಸು ಗಟ್ಟಿ, ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಸುನೀಲ್ ತೊಕ್ಕೊಟು, ಗೌರವಾಧ್ಯಕ್ಷರಾಗಿ ಸದಾನಂದ ಒಂಭತ್ತುಕೆರೆ, ಗೌರವ ಸಲಹೆಗಾರರಾಗಿ ಯು.ಎಂ.ಹಮೀದ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story