ದ್ವಿತೀಯ ಪಿಯು ಪರೀಕ್ಷೆ: ಮೆಲ್ಕಾರ್ ಮಹಿಳಾ ಪಪೂ ಕಾಲೇಜಿಗೆ ಉತ್ತಮ ಫಲಿತಾಂಶ
ಮಂಗಳೂರು: ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನಿಂದ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ ಒಟ್ಟು 122 ಮಂದಿ ವಿದ್ಯಾರ್ಥಿನಿಯರ ಪೈಕಿ 115 ಮಂದಿ ಉತ್ತೀರ್ಣರಾಗಿ 95 ಶೇ. ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ ಅಸ್ಬಾ ಹುನ್ನಿಸ 575(95.83 ಶೇ.) ಅಂಕ, ವಿಜ್ಞಾನ ವಿಭಾಗದಲ್ಲಿ ನಫೀಸ ಸಹಬ 558(93 ಶೇ.) ಅಂಕಗಳು, ಕಲಾ ವಿಭಾಗದಲ್ಲಿ ನಿಷತ್ ಫಾತಿಮಾ ಎ.ಆರ್. 566(94.33 ಶೇ.) ಅಂಕಗಳನ್ನು ಪಡೆದು ವಿಭಾಗವಾರು ಪ್ರಥಮ ಸ್ಥಾನಿಗಳಾಗಿದ್ದಾರೆ. 27 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 78 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಹಾಜಿ ಎಸ್.ಎಂ.ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story