ಯುವಕ ಆತ್ಮಹತ್ಯೆ
ಕಾರ್ಕಳ : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬಜಗೋಳಿ ಗರಡಿಗುಡ್ಡೆಯ ರಾಜು ಪೂಜಾರಿ ಎಂಬವರ ಮಗ ಪ್ರದೀಪ (31) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಜೂ.೧೬ರ ಸಂಜೆಯಿಂದ ಜೂ.೧೯ರ ಬೆಳಗಿನ ಮಧ್ಯಾವಧಿಯಲ್ಲಿ ಮುಡಾರು ಗ್ರಾಮದ ಕೊಂಕದಕಾಪು ಎಂಬಲ್ಲಿ ಶೆಡ್‌ನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story