ಪ್ರತ್ಯೇಕ ಪ್ರಕರಣ: ಅಪರಿಚಿತ ಯುವಕರ ಮೃತದೇಹ ಪತ್ತೆ
ಮಂಗಳೂರು : ನಗರದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಪರಿಸರದ ಕಟ್ಟಡವೊಂದರಲ್ಲಿ ಸುಮಾರು ೩೦ರಿಂದ ೩೫ ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.
ಅಂದಾಜು ೫ ಅಡಿ ಎತ್ತರದ, ಸಾಧಾರಣ ಮೈಕಟ್ಟು ಹೊಂದಿರುವ ಈ ವ್ಯಕ್ತಿಯ ಬಲ ಕೈಯಲ್ಲಿ ನಾಗರ ಹಾವಿನ ಹಚ್ಚೆ ಇದೆ. ನೀಲಿ ಬಣ್ಣದ ಟಿ-ಶರ್ಟ್ ಧರಿಸಿದ್ದಾರೆ.
ಜೋಕಟ್ಟೆ ಸಮೀಪ ರೈಲ್ವೆ ಹಳಿಯಲ್ಲಿ ರವಿವಾರ ಸುಮಾರು ೩೦ ವರ್ಷ ಪ್ರಾಯದ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದೆ, ೫.೫ ಅಡಿ ಎತ್ತರದ, ಸಾಧಾರಣ ಮೈಕಟ್ಟು ಹೊಂದಿರುವ ಈ ವ್ಯಕ್ತಿ ಗೋಧಿ ಮೈಬಣ್ಣ, ಗುಂಡು ಮುಖ, ಗಿಡ್ಡ ಮೂಗು ಹೊಂದಿದ್ದು ಮೀಸೆ ಮತ್ತು ಗಡ್ಡ ಬಿಟ್ಟಿದ್ದಾರೆ. ಮಾಸಲು ಬಿಳಿ ಬಣ್ಣದ ಟಿ ಶರ್ಟ್, ಮಾಸಲು ಹಸಿರು ಬಣ್ಣದ ಜೀನ್ಸ್ ಚಡ್ಡಿ ಧರಿಸಿದ್ದಾರೆ.
ಇವರ ವಾರಸುದಾರರು ಇದ್ದರೆ ಮಂಗಳೂರು ರೈಲ್ವೆ ಠಾಣೆ (೦೮೨೪-೨೨೨೦೫೫೯)ಯನ್ನು ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
Next Story