ಪಿಯುಸಿ ಫಲಿತಾಂಶ: ಕಣಚೂರು ಮಹಿಳಾ ಕಾಲೇಜಿನ 56 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಮಂಗಳೂರು : ದೇರಳಕಟ್ಟೆಯ ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗವು ಶೇ.೯೮.೨೪ ಮತ್ತು ವಾಣಿಜ್ಯ ವಿಭಾಗವು ಶೇ.೯೬.೧೦, ಕಲಾ ವಿಭಾಗದಲ್ಲಿ ಶೇ.೧೦೦ ಫಲಿತಾಂಶ ದಾಖಲಿಸಿದೆ. ಕಾಲೇಜಿಗೆ ಒಟ್ಟು ಶೇ.೯೭.೨೯೭ ಫಲಿತಾಂಶ ಬಂದಿದೆ.
ಪರೀಕ್ಷೆ ಬರೆದ ಒಟ್ಟು ೧೪೮ ವಿದ್ಯಾರ್ಥಿಗಳ ಪೈಕಿ ೧೪೪ ಮಂದಿ ಉತ್ತೀರ್ಣರಾಗಿದ್ದಾರೆ. ಅದರಲ್ಲಿ ೫೬ ವಿದ್ಯಾರ್ಥಿ ಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು ೮೨ ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಜ್‌ಕಿಯಾ ರಿಫಾ ಖಾನ್ ಶೇ.೯೭.೦೬, ವಾಣಿಜ್ಯ ವಿಭಾಗದಲ್ಲಿ ಇರ್ಷಾನಾ ಶೇ.೯೭.೦೬, ಕಲಾ ವಿಭಾಗದಲ್ಲಿ ಖದೀಜಾ ಜಝೀಲಾ ಶೇ.೯೧.೮೩ ಫಲಿತಾಂಶ ದಾಖಲಿಸಿದ್ದಾರೆ.
Next Story