ʼಮೋದಿ ಹಿಟ್ಲರ್ ರೀತಿ ಸಾವನ್ನಪ್ಪುತ್ತಾರೆʼ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ಸುಬೋಧ್ ಕಾಂತ್
![ʼಮೋದಿ ಹಿಟ್ಲರ್ ರೀತಿ ಸಾವನ್ನಪ್ಪುತ್ತಾರೆʼ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ಸುಬೋಧ್ ಕಾಂತ್ ʼಮೋದಿ ಹಿಟ್ಲರ್ ರೀತಿ ಸಾವನ್ನಪ್ಪುತ್ತಾರೆʼ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ಸುಬೋಧ್ ಕಾಂತ್](https://www.varthabharati.in/sites/default/files/images/articles/2022/06/20/339504-1655725682.jpg)
facebook.com/SubodhKantSahaiINC
ಹೊಸದಿಲ್ಲಿ: ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುಬೋಧ್ ಕಾಂತ್ ಸಹಾಯ್, ಹಿಟ್ಲರ್ನಂತೆ ವರ್ತಿಸುವವರು ಹಿಟ್ಲರ್ ರೀತಿಯಲ್ಲಿಯೇ ಸಾಯುತ್ತಾರೆ ಎಂದಿದ್ದಾರೆ.
"ಮೋದಿ ಹಿಟ್ಲರ್ ಕಿ ಮೌತ್ ಮರೇಗಾ" (ಮೋದಿ ಹಿಟ್ಲರ್ ರೀತಿ ಸಾವನ್ನಪ್ಪುತ್ತಾರೆ) ಎಂದು ಸಹಾಯ್ ಹೇಳಿದ್ದಾರೆ.
ಸಹಾಯ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ರಘುಬೀರ್ ದಾಸ್ "ಅಸಂವಿಧಾನಿಕ ಭಾಷೆ ಬಳಸುವುದು ಕಾಂಗ್ರೆಸ್ ಪಕ್ಷದ ಡಿಎನ್ಎ ಯಲ್ಲಿದೆ" ಎಂದಿದ್ದಾರೆ.
"ಮೋದಿ ಗುಜರಾತ್ ಸೀಎಂ ಆಗಿದ್ದ ವೇಳೆ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೋದಿ ಅವರನ್ನು ʼಮೌತ್ ಕಿ ಸೌದಾಗರ್ʼ (ಸಾವಿನ ವ್ಯಾಪಾರಿ) ಎಂದು ಬಣ್ಣಿಸಿದ್ದರು ಎಂದು ದಾಸ್ ನೆನಪಿಸಿದ್ದಾರೆ. "ಗುಜರಾತ್ ಜನರು ಇಂತಹ ಭಾಷೆಯ ಪ್ರಯೋಗದಿಂದ ನೋವು ಅನುಭವಿಸಿದ್ದಾರೆ, ಇದೇ ಕಾರಣ ಈ ಚುನಾವಣೆಯಲ್ಲಿ ಮೋದಿಗೆ ಅಭೂತಪೂರ್ವ ಗೆಲುವು ದೊರಕಿತ್ತು"ಎಂದು ಅವರು ಹೇಳಿದರು.
"ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಆರಿಸುವ ಮೂಲಕ ಜನರು ತಮ್ಮ ಪ್ರೀತಿ ತೋರಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗುತ್ತಿಲ್ಲ" ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕ ಅಮಿತ್ ಮಾಲವಿಯ ಪ್ರತಿಕ್ರಿಯಿಸಿ "ಕಾಂಗ್ರೆಸ್ ಪಕ್ಷ ಪ್ರಧಾನಿಯ ಬಗ್ಗೆ ನಿಂದನಾತ್ಮಕ ಭಾಷೆ ಪ್ರಯೋಗಿಸಿದ್ದು ಇದೇ ಮೊದಲ ಬಾರಿಯೇನಲ್ಲ, ನಿಜ ಹೇಳಬೇಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಹತಾಶೆಯಾಗಿದೆ ಹಾಗೂ ದೇಶಕ್ಕಾಗಿ ದುಡಿಯುತ್ತಿರುವ ಪ್ರಧಾನಿ ಬಗ್ಗೆ ಇಂತಹ ಭಾಷೆ ಬಳಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಸುಬೋಧ್ ಕಾಂತ್ ಸಹಾಯ್ ಅವರ ಹೇಳಿಕೆಯನ್ನು ಸಮರ್ಥಿಸದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ "ಕಾಂಗ್ರೆಸ್ ಪಕ್ಷವು ಮೋದಿ ಸರಕಾರದ ಸರ್ವಾಧಿಕಾರದ ಸಿದ್ಧಾಂತ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮುಂದುವರಿಸಲಿದೆ. ಆದರೆ ಪ್ರಧಾನಿ ಬಗ್ಗೆ ಅನುಚಿತ ಹೇಳಿಕೆಯನ್ನು ಒಪ್ಪುವುದಿಲ್ಲ" ಎಂದರು.
#WATCH | Modi will die Hitler's death if he follows his path, says Congress leader Subodh Kant Sahay at party's 'Satyagrah' protest against ED questioning of Rahul Gandhi & Agnipath scheme in Delhi pic.twitter.com/fO8LfRShvK
— ANI (@ANI) June 20, 2022