ಮೂಳೂರು ಅಲ್ಇಹ್ಸಾನ್ ಕಾಲೇಜಿಗೆ ಶೇ. 92.96 ಫಲಿತಾಂಶ

ರಿಝಾನ
ಕಾಪು : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನದ ಮೂಳೂರು ಅಲ್ ಇಹ್ಸಾನ್ ಮಹಿಳಾ ಪದವಿ ಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.೯೨.೯೬ ಫಲಿತಾಂಶ ದಾಖಲಿಸಿದೆ.
೧೫ ವಿದ್ಯಾರ್ಥಿನಿಯರು ವಿಶಿಷ್ಟ ದರ್ಜೆಯಲ್ಲಿ, ೩೮ ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಮತ್ತು ೮ ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ರಿಝಾನ ೫೮೯ ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಹಾಗೂ ರಾಜ್ಯದಲ್ಲಿ ಎಂಟನೇ ರ್ಯಾಂಕ್ ಪಡೆದಿದ್ದಾರೆ.
ಇವರು ಅಬ್ದುಲ್ ರೆಹಮಾನ್ ಮತ್ತು ಆಯಿಶತುಲ್ ರೆಹೆನ ದಂಪತಿ ಪುತ್ರಿ.
Next Story