ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆ ವಿರೋಧಿಸುವವರು ಜಿಹಾದಿಗಳು: ಬಿಜೆಪಿ ಶಾಸಕನಿಂದ ವಿವಾದ ಸೃಷ್ಟಿ

Photo: Newsd.in
ಹೊಸದಿಲ್ಲಿ: ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗುತ್ತಿದ್ದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಇದೀಗ ಮತ್ತೊಂದು ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. ಅಗ್ನಿಪಥ್ ಯೋಜನೆಯನ್ನು ವಿರೋಧಿಸುವವರು ʼಜಿಹಾದಿಗಳುʼ ಎಂದು ಅವರು ಹೇಳಿದ್ದಾರೆ. ಸೇನೆಗೆ ಸೇರುವುದು ಉದ್ಯೋಗದ ನಿಮಿತ್ತವಲ್ಲ, ದೇಶದ ಸೇವೆಗಾಗಿ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
"ಸೇನೆಗೆ ಸೇರುವುದು ದೇಶಸೇವೆಯೇ ಹೊರತು ಉದ್ಯೋಗಕ್ಕಾಗಿ ಅಲ್ಲ. ನೆಮ್ಮದಿಯನ್ನು ಹುಡುಕುವವರಿಗೆ ಸೇನೆಯ ಅಗತ್ಯವಿಲ್ಲ. ಸೈನ್ಯಕ್ಕೆ ಸೇರ್ಪಡೆಗೊಂಡವರು ಯಾವ ಅನುಕೂಲವನ್ನೂ ನೋಡುವುದಿಲ್ಲ. ಅವರು ಭಾರತ ಮಾತೆಗಾಗಿ ಪ್ರಾಣತ್ಯಾಗ ಮಾಡಲೂ ಸಿದ್ಧರಾಗಿರುತ್ತಾರೆ. ಅಗ್ನಿಪಥ್ ಯೋಜನೆಯಡಿಯಲ್ಲಿ ಯುವಕರು ನಾಲ್ಕು ವರ್ಷಗಳಲ್ಲಿ ಯಾವುದೇ ಉದ್ಯೋಗಕ್ಕೆ ಅರ್ಹರಾಗುವ ರೀತಿಯಲ್ಲಿ ತರಬೇತಿ ನೀಡಲಾಗುವುದು" ಎಂದು ಅವರು ಹೇಳಿದ್ದಾರೆ.
"ಈ ಯೋಜನೆಯನ್ನು ವಿರೋಧಿಸುವವರು ಜಿಹಾದಿಗಳು. ಇಂತಹಾ ಯೋಜನೆಯನ್ನು ಕಾರ್ಯಗತಗೊಳಿಸಿರುವುದಕ್ಕೆ ದೇಶದ ಯುವಜನತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞರಾಗಿರಬೇಕು" ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
'अग्निपथ' का विरोध करने वाले 'जेहादी' है: BJP विधायक हरिभूषण ठाकुर बचौल #AgnipathScheme pic.twitter.com/5HuKNjlhvb
— News24 (@news24tvchannel) June 20, 2022







