Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ...

ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಟ್ವಿಟರ್‌ ನಲ್ಲಿ #AnswerMadiModi ಟ್ರೆಂಡಿಂಗ್

ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

ವಾರ್ತಾಭಾರತಿವಾರ್ತಾಭಾರತಿ20 Jun 2022 7:52 PM IST
share
ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಟ್ವಿಟರ್‌ ನಲ್ಲಿ #AnswerMadiModi ಟ್ರೆಂಡಿಂಗ್

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಐಐಎಸ್‌ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ಮೋದಿ, ಇನ್ನೂ ಹಲವು ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಜೂನ್‌ 21ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳು, ಮೇಕೆದಾಟು ಯೋಜನೆ, ಹಿಂದಿ ಹೇರಿಕೆ, ಬೆಂಗಳೂರು ಉಪನಗರ ರೈಲು ಯೋಜನೆ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರಿಸುವಂತೆ ಕಾಂಗ್ರೆಸ್ #AnswerMadiModi ಹೆಸರಿನಲ್ಲಿ ಅಭಿಯಾನ ಮಾಡಿದೆ. ನೆಟ್ಟಿಗರೂ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ.

“ಮೈಸೂರನ್ನು ಪ್ಯಾರಿಸ್ ಮಾಡುವೆ ಎಂದು ಕೊಚ್ಚಿಕೊಂಡ ನೀವು ಮೈಸೂರಿಗೆ ನಯಾ ಪೈಸೆ ಹೆಚ್ಚಿನ ಹಣ ಕೊಟ್ಟಿಲ್ಲ - ಒಬ್ಬನೇ ಬಿಜೆಪಿ ಸಂಸದರೂ ಇಲ್ಲದ ತಮಿಳುನಾಡಿಗೆ 14 ವೈದ್ಯಕೀಯ ಕಾಲೇಜುಗಳು, ಆದರೆ 25 ಬಿಜೆಪಿ ಸಂಸದರನ್ನು ಕೊಟ್ಟ ನಮ್ಮ ರಾಜ್ಯಕ್ಕೆ ಅನ್ಯಾಯ - ಅಡಿಗಡಿಗೂ ಕೇಂದ್ರದಿಂದ ಅನಗತ್ಯ ಹಿಂದಿ ಹೇರಿಕೆ” ಎಂದು ಯತೀಂದ್ರ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

“ಮೋದಿಜಿ ಸ್ವಚ್ಛಭಾರತದ ಬಗ್ಗೆ ನಿಮ್ಮ ಕಾಳಜಿಯು ಕ್ಯಾಮರಾಮ್ಯಾನ್ ಜೊತೆಯಲ್ಲಿ ಕೆಲವು ಬಾಟಲಿಗಳನ್ನು ಎತ್ತಿಕೊಳ್ಳುವಲ್ಲಿ ಕೊನೆಗೊಳ್ಳುತ್ತದೆಯೇ? ನಿಮ್ಮನ್ನು ಸ್ವಾಗತಿಸಲು ಸಾವಿರಾರು ಫ್ಲೆಕ್ಸ್ ಬ್ಯಾನರ್‌ಗಳಿಗೆ ಏಕೆ ಆಕ್ಷೇಪಣೆ ಇಲ್ಲ? ಈ ಬ್ಯಾನರ್‌ಗಳು ಪ್ರಮುಖ ಆರೋಗ್ಯ ಮತ್ತು ಸುರಕ್ಷತಾ ಅಪಾಯ ಮತ್ತು ಸಾರ್ವಜನಿಕ ಉಪದ್ರವವೂ ಹೌದು!” ಎಂದು ಶ್ರೀ ಟಾಕ್ಸ್‌ ಎಂಬವರು ಪ್ರಶ್ನಿಸಿದ್ದಾರೆ.

“ಮೇಕೆದಾಟು ಯೋಜನೆ ಅನುಷ್ಠಾನ ಯಾವಾಗ? ಕೋಮುಗಲಭೆಗಳು ನಿಲ್ಲುವುದು ಯಾವಾಗ? ಬಿಎಸ್‌ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾಕೆ ತೆಗೆದಿರಿ?” ಎಂದು ಸಿಜಿನ್‌ ಟಿ ಸನ್ನಿ ಎಂಬವರು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ನಿರುದ್ಯೋಗ, ಜಿಡಿಪಿ ಕುಸಿತ, ಬೆಲೆ ಏರಿಕೆ ಮೊದಲಾದವುಗಳ ಬಗ್ಗೆ ಪ್ರಶ್ನಿಸಿದರೆ, ಹಲವಾರು ಮಂದಿ ಪಿಎಂ ಕೇರ್ಸ್‌ ನಿಧಿಯ ಬಗ್ಗೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸುತ್ತಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತೂ, ಈ ಅಭಿಯಾನದ ಭಾಗವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದು ಹಲವು ಪ್ರಶ್ನೆಗಳನ್ನು ಪ್ರಧಾನಿಗೆ ಕೇಳಿದ್ದಾರೆ.


#SaveKarnatakaFromModi #GobackModi ಎಂಬ ಹ್ಯಾಷ್‌ಟ್ಯಾಗ್‌ ಕೂಡಾ ಟ್ರೆಂಡ್‌ ಆಗುತ್ತಿದ್ದು, “ವಿದ್ಯಾರ್ಥಿಗಳು ಯಾವುದರೊಂದಿಗೆ ಬರುತ್ತಾರೆ ಎಂಬುದನ್ನು ಸರ್ವಾಧಿಕಾರಿ ಅರಿತುಕೊಂಡಿದ್ದಾರೆ.. ಹೇಡಿತನದ ಪ್ರಧಾನಿ, ಮಂಕಿ ಬಾತ್‌ಗೆ ಮಾತ್ರ ಸೂಕ್ತ. ಇದು ಅವರು ವಿದ್ಯಾರ್ಥಿಗಳನ್ನು (ಭಾರತದ ಭವಿಷ್ಯವನ್ನು) ನಡೆಸಿಕೊಳ್ಳುವ ಮತ್ತು ಬಳಸಿಕೊಳ್ಳುವ ವಿಧ. ಪ್ರತಿಯೊಬ್ಬ ಯುವಕರು ಅರ್ಥ ಮಾಡಿಕೊಳ್ಳಬೇಕು, ಇಂದಲ್ಲದಿದ್ದರೆ ಅದು ಎಂದೂ ಸಾಧ್ಯವಿಲ್ಲ” ಎಂದು ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಿರುವುದನ್ನು ಉಲ್ಲೇಖಿಸಿ ರೋಷನ್‌ ಗಣಪತಿ ಎಂಬವರು ಟ್ವೀಟ್‌ ಮಾಡಿದ್ದಾರೆ. 

“ಕರ್ನಾಟಕಕ್ಕೆ ಬರುವ ಮುನ್ನ ಚೂರು ಪ್ರಜ್ಞೆ ಹೊಂದಿ ಮಿ. ಮೋದಿ . ನಾವು ಕನ್ನಡಿಗರು ಭಕ್ತರಲ್ಲ!” ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ.

Why declare holiday to colleges ? Why those banners ?
Don't u have the best security worth 1.62 crore per day ?#AnswerMadiModi

— Dr Jwala Gurunath (@DrJwalaG) June 20, 2022

Mr. Modi have some sense before coming to Karnataka. We kannadigas not Bhakts!#SaveKarnatakaFromModi#GoBackModi

— Voice Of Koppal (@Voiceofkoppal) June 20, 2022

#StudentsAgainstModi#GoBackModi
Dictator realised what students will come up with.. Cowardice PM, only fit for Manki(monkey) baath. This is how he treats and utilise students (future of india. Everyone youths must realise now or never. @NSUIKarnataka pic.twitter.com/3Occe0Ah8Y

— Roshan Ganapathy Kombarana (@kombarana_R) June 19, 2022

Let People know about the PM Care Fund account.@narendramodi#AnswerMadiModi

— Naseeb Ahmed (@NASEEBCH19) June 20, 2022

When will Mekedatu project will be implemented?

When will be communal disturbances stopped?

Why did you removed @BSYBJP
As chief minister?#AnswerMadiModi

— Sijin T Sunny (@SijinTSunny_inc) June 20, 2022

People of Karnataka are looking forward to the implementation of Mekedatu project
Why is the Central government reluctant to approve the project? #AnswerMadiModi @PMOIndia @narendramodi @BJP4India @BJP4Karnataka pic.twitter.com/6SN6tYYeWR

— INC Hubli-Dharwad East-72 (@INCHubDwdEast) June 20, 2022

#AnswerMadiModi pic.twitter.com/UypfikzpGH

— GIRISHKUMAR Padmanabhanagar (@girishkumar2007) June 20, 2022

ಕೋವಿಡ್ ವೇಳೆಯಲ್ಲಿ ನೀವು ಹೇಳಿದಂತೆ ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆದು, ದೀಪ ಹಚ್ಚಿದೆವು.

ಆದರೆ ತುರ್ತು ಸಮಯದಲ್ಲಿ ಆಕ್ಸಿಜನ್ ಪೂರೈಸದೇ ರಾಜ್ಯದ ಮಳವಳ್ಳಿಯ 34 ಮಂದಿ ಪ್ರಾಣ ನುಂಗಿದ್ದು ಏಕೆ?

ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತೇ ಇಲ್ಲ ಎಂದು ನಿಮಗೆ ಸುಳ್ಳು ವರದಿ ಕೊಟ್ಟ ನಿಮ್ಮ ಸರ್ಕಾರದ ವಿರುದ್ಧ ಕ್ರಮ ಇಲ್ಲ ಏಕೆ?#AnswerMadiModi

— Saeed Pasha (@MdSaeedPasha) June 20, 2022

For Crony Capitalism Modi's 100% Support, For Common Man 40% Commission, Why This @BJP4Karnataka, Will @narendramodi Ji Answer This? #AnswerMadiModi pic.twitter.com/kFithtepX6

— GIRISHKUMAR Padmanabhanagar (@girishkumar2007) June 20, 2022

ಕಳೆದ 8 ವರ್ಷದಿಂದ ರಾಜ್ಯದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಮೂಲಕ ₹19 ಲಕ್ಷ ಕೋಟಿ ಸಂಗ್ರಹವಾಗಿದ್ದು, ವಿವಿಧ ಯೋಜನೆಗಳ ಮೂಲಕ ಕೊಟ್ಟಿರೋದು ಕೇವಲ ₹4.5 ಲಕ್ಷ ಕೋಟಿ.

ಇನ್ನೂ ರಾಜ್ಯಕ್ಕೆ GST ಪಾಲು ನೀಡದೆ ಸಾಲ ನೀಡಿ, ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡುತ್ತಿರುವುದು ಏಕೆ? ರಾಜ್ಯಕ್ಕೆ ಇಂತಹ ಅನ್ಯಾಯ ಏಕೆ?#AnswerMadiModi

— Kiran Lamani :- ಕಿರಣ ಲಮಾಣಿ (@Kiranlamani8151) June 20, 2022

- ಮೈಸೂರನ್ನು ಪ್ಯಾರಿಸ್ ಮಾಡುವೆ ಎಂದು ಕೊಚ್ಚಿಕೊಂಡ ನೀವು ಮೈಸೂರಿಗೆ ನಯಾ ಪೈಸೆ ಹೆಚ್ಚಿನ ಹಣ ಕೊಟ್ಟಿಲ್ಲ
- ಒಬ್ಬನೇ ಬಿಜೆಪಿ ಸಂಸದರೂ ಇಲ್ಲದ ತಮಿಳುನಾಡಿಗೆ 14 ವೈದ್ಯಕೀಯ ಕಾಲೇಜುಗಳು, ಆದರೆ 25 ಬಿಜೆಪಿ ಸಂಸದರನ್ನು ಕೊಟ್ಟ ನಮ್ಮ ರಾಜ್ಯಕ್ಕೆ ಅನ್ಯಾಯ
- ಅಡಿಗಡಿಗೂ ಕೇಂದ್ರದಿಂದ ಅನಗತ್ಯ ಹಿಂದಿ ಹೇರಿಕೆ #AnswerMadiModi

— Dr Yathindra Siddaramaiah (@Dr_Yathindra_S) June 20, 2022

#AnswerMadiModi pic.twitter.com/ULA1QkzPHL

— Siddaramaiah (@siddaramaiah) June 20, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X