ಮಂಗಳೂರು : ಎಚ್ಐಎಫ್ ವತಿಯಿಂದ ಎಸೆಸೆಲ್ಸಿಯಲ್ಲಿ ಶೇ.90 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ (ಎಚ್ಐಎಫ್) ವತಿಯಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗು ಸ್ಕಾಲರ್ ಶಿಪ್ ವಿತರಣೆ ಕಾರ್ಯಕ್ರಮವು ಎಚ್ಐಎಫ್ ಆಡಿಟೋರಿಯಂ ಹಾಲ್ ನಲ್ಲಿ ಸೋಮವಾರ ನಡೆಯಿತು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ಈ ಸಂದರ್ಭ ಸ್ಕಾಲರ್ ಶಿಪ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಿಎ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರು, ಮೈಂಡ್ ಮ್ಯಾಪಿಂಗ್ ತಜ್ಞರು, ತರಬೇತುದಾರರಾದ ಡಾ. ಸರ್ಫ್ರಾಝ್ ಜೆ. ಹಾಸಿಮ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸ್ಪರ್ಧಾತ್ಮಕ ಜೀವನದಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯ ಕಲಿಕೆಯ ವಿಧಾನ ಕುರಿತು ಉಪನ್ಯಾಸ ನೀಡಿದರು.
ಎಚ್ಐಎಫ್ ಅಧ್ಯಕ್ಷ ನಾಝಿಮ್ ಏಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಚ್‌ಇಸಿಸಿ ಕಾರ್ಯದರ್ಶಿ ಹನೀಫ್ ಪಿ.ಎಸ್., ಮಸ್ಜಿದ್ ಉಲ್ ಇಹ್ಸಾನ್ ಇಮಾಮ್ ಮೌಲಾನ ಅಲ್ತಾಫ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಔಸಫ್ ಹುಸೈನ್ ಪ್ರಾಸ್ತಾವಿಕ ಭಾಷಣ ಮಾಡಿದರು. ರಿಝ್ವಾನ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿ, ಬಿಲಾಲ್ ರೌಫ್ ವಂದಿಸಿದರು.