ಜೀಪು ಪಲ್ಟಿ: ಯುವತಿ ಮೃತ್ಯು, ಮೂವರು ಗಂಭೀರ
ಕಾರ್ಕಳ : ಜೀಪೊಂದು ಸ್ಕಿಡ್ ಪಲ್ಟಿಯಾದ ಪರಿಣಾಮ ಓರ್ವ ಯುವತಿ ಮೃತಪಟ್ಟು, ಮಂದಿ ಗಾಯಗೊಂಡಿರುವ ಘಟನೆ ಜೂ.19ರಂದು ರಾತ್ರಿ ಮುಂಡ್ಕೂರು ಗ್ರಾಮದ ಸಂಕಲಕರಿಯ ದೊಡ್ಡಮನೆ ದ್ವಾರದ ಬಳಿ ಕಿನ್ನಿಗೊಳಿ-ಬೆಳ್ಮಣ್ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಪಾವನಾ ಮೂಲ್ಯ(೧೮) ಎಂದು ಗುರುತಿಸಲಾಗಿದೆ. ಜೀಪಿನ ಚಾಲಕ ಭಾಸ್ಕರ್ ಮೂಲ್ಯ ಹಾಗೂ ಪ್ರಯಾಣಿಕರಾದ ಭಾರತಿ(೫೫), ಪ್ರೀತಿ (೨೦) ಎಂಬವರು ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆ ಪಡೆಯು ತ್ತಿದ್ದಾರೆ.
ಕಿನ್ನಿಗೊಳಿ ಕಡೆಯಿಂದ ಮುಂಡ್ಕೂರು ಕಡೆಗೆ ರಸ್ತೆಯ ತಿರುವಿನಲ್ಲಿ ಅತೀವೇಗ ಹಾಗೂ ಅಜಾಗರೂತೆಯಿಂದ ಚಲಾಯಿಸಿದ ಪರಿಣಾಮ ಜೀಪು ಸ್ಕಿಡ್ ಆಗಿ ಪಲ್ಟಿಯಾಯಿತು. ಇದರ ಪರಿಣಾಮ ಪಾವನಾ ಮೂಲ್ಯ ಗಂಭೀರ ಗಾಯ ಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story