ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು ಶೇ. 100 ಫಲಿತಾಂಶ
ಸೌಮ್ಯ ಎಸ್ ಎಂ.ಗೆ ರಾಜ್ಯದಲ್ಲಿ 5ನೇ ಸ್ಥಾನ
ಮಂಗಳೂರು, ಜೂ. 20: ಮಂಗಳೂರಿನ ಮೆನ್ನಬೆಟ್ಟು ಗ್ರಾಮದ ಕಮ್ಮಾಜೆಯಲ್ಲಿರುವ ಸಮಾಜ ಕಲ್ಯಾಣ ಇಲಾಖಾ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಸತತವಾಗಿ ನಾಲ್ಕನೇ ಬಾರಿಗೆ ಶೇ.100 ಫಲಿತಾಂಶ ಸಾಧಿಸಿದೆ.
ಪರೀಕ್ಷೆಗೆ ಹಾಜರಾದ 70 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ಉಳಿದ 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.
ಸೌಮ್ಯ ಎಸ್ ಎಂ. 594 (ಶೇ. 99), ಇವರು ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದು ರಾಜ್ಯದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜುಗಳಿಗೆ ಪ್ರಥಮ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ನಮಿತಾ, ಎನ್, ಎಚ್, 585 (ಶೇ. 97.50), ಶೈಲೇಶ್ ಕೆ. 585 (ಶೇ. 97.50) ಹಾಗೂ ಅಂಜು ಜಾಕೋಬ್ 582 (ಶೇ. 97) ಅಂಕ ಗಳಿಸಿದ್ದಾರೆ. ಶೇ.100 ಫಲಿತಾಂಶಕ್ಕೆ ಕಾರಣರಾದ ಕಾಲೇಜು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಅಭಿನಂದಿಸಿದ್ದಾರೆ.